ದೇಳಿ/ಕಾಸರಗೋಡು :  ತಾಜುಲ್ ಉಲಮಾ ಸಯ್ಯಿದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ ಉಳ್ಳಾಲ ತಂಙಳ್ ಮತ್ತು ನೂರುಲ್ ಉಲಮಾ ಎಂ. ಎ. ಅಬ್ದುಲ್ ಖಾದಿರ್ ಮುಸ್ಲಿಯಾರ್ ಅವರ ಆಂಡ್ ನೇರ್ಚೆ ಹಾಗೂ ಸಅದಿಯಾ ಸನದುದಾನ ಸಮ್ಮೇಳನಕ್ಕೆ ಆಧ್ಯಾತ್ಮಿಕ ಸಂಗಮದೊಂದಿಗೆ ಶನಿವಾರ ಭವ್ಯ ಚಾಲನೆ ನೀಡಲಾಯಿತು.

ನೂರುಲ್ ಉಲಮಾ ಎಂ. ಎ. ಉಸ್ತಾದ್ ಹಾಗೂ ಕಲ್ಲಟ್ರ ಅಬ್ದುಲ್ ಖಾದಿರ್ ಹಾಜಿ ಅವರ ಝಿಯಾರತ್‌ಗೆ ಸಯ್ಯಿದ್ ಜಮಲುಲ್ಲೈಲಿ ತಂಙಳ್ ನೇತೃತ್ವ ನೀಡಿದರು. ನಂತರ ಸ್ವಾಗತ ಸಮಿತಿ ಅಧ್ಯಕ್ಷ ಸಯ್ಯಿದ್ ಪಿ. ಎಸ್. ಆಟಕೋಯ ಬಾಹಸನ್ ತಂಙಳ್ ಪಂಜಿಕ್ಕಲ್ ಧ್ವಜಾರೋಹಣ ನೆರವೇರಿಸಿದರು.

ಸಮ್ಮೇಳನದ ಸ್ವಾಗತ ಸಮಿತಿ ಖಜಾಂಚಿ ಇಬ್ರಾಹಿಂ ಕಲ್ಲಟ್ರ ಅವರ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ ನಡೆದ ಕುಟುಂಬ ಸಂಗಮವನ್ನು ಎಂ. ಎ. ಅಬ್ದುಲ್ ವಹಾಬ್ ತ್ರಿಕ್ಕರಿಪ್ಪೂರ್ ಉದ್ಘಾಟಿಸಿದರು. ಇಬ್ರಾಹಿಂ ಸಖಾಫಿ ಪುಝಕ್ಕಾಟಿರಿ ವಿಷಯ ಮಂಡಿಸಿದರು. ಕೊಲ್ಲಂಬಾಡಿ ಅಬ್ದುಲ್ ಖಾದಿರ್ ಸಅದಿ ಮತ್ತು ಹನೀಫ್ ಅನೀಸ್ ಮಾತನಾಡಿದರು. ಸುಲೈಮಾನ್ ಕರಿವೆಳ್ಳೂರು ಸ್ವಾಗತಿಸಿದರು. ಶರಫುದ್ದೀನ್ ಸಅದಿ ವಂದಿಸಿದರು.

ಸಾಯಂಕಾಲ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ 248 ಯುವ ವಿದ್ವಾಂಸರಿಗೆ ಸನದು ಪ್ರದಾನ ಮಾಡುವುದರೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor