ಕಾಸರಗೋಡು ಜಿಲ್ಲಾ ನೂತನ ಎಸ್ಪಿಯಾಗಿ ನಿತಿನ್ ರಾಜ್ ನೇಮಕ
Update: 2026-06-12 09:47 IST
ಕಾಸರಗೋಡು: ಕಾಸರಗೋಡು ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ನಿತಿನ್ ರಾಜ್ ಪಿ. ಅವರನ್ನು ನೇಮಿಸಲಾಗಿದೆ. ಇವರು ಈ ಮೊದಲು ಕಣ್ಣೂರು ನಗರ ಪೊಲೀಸ್ ಆಯುಕ್ತರಾಗಿದ್ದರು.
ಹಾಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ವಿಜಯ್ ಭರತ್ ರೆಡ್ಡಿಯವರನ್ನು ಕಣ್ಣೂರು ನಗರ ಪೊಲೀಸ್ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ.
ಕಾಸರಗೋಡು ಜಿಲ್ಲೆಯ ರಾವಣೇಶ್ವರ ನಿವಾಸಿಯಾಗಿರುವ ನಿತಿನ್ ರಾಜ್, ಕೇರಳ ಕೇಡರ್ ನ ಐಪಿಎಸ್ ಅಧಿಕಾರಿ. 2019 ಬ್ಯಾಚ್ ಅಧಿಕಾರಿಯಾದ ಇವರು, 2018ರ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ 210ನೇ ರ್ಯಾಂಕ್ ಗಳಿಸಿದ್ದರು.