ಮಂಜೇಶ್ವರ: ಜ್ಯುವೆಲ್ಲರಿಗೆ ನುಗ್ಗಿ ಕಳವಿಗೆ ವಿಫಲ ಯತ್ನ
Update: 2026-06-02 14:12 IST
ಸಾಂದರ್ಭಿಕ ಚಿತ್ರ
ಮಂಜೇಶ್ವರ: ವರ್ಕಾಡಿ ಮಜೀರ್ಪಳ್ಳ ಎಂಬಲ್ಲಿ ಜ್ಯುವೆಲ್ಲರಿಗೆ ನುಗ್ಗಿದ ಕಳ್ಳರು ಕಳವಿಗೆ ವಿಫಲ ಯತ್ನ ನಡೆಸಿದ ಘಟನೆ ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.
ಅಶ್ರಫ್ ಮತ್ತು ಶಹೀರ್ ಮಾಲಕತ್ವದ ಜ್ಯುವೆಲ್ಲರಿಯ ಶಟರ್ ಮುರಿಯಲಾಗಿದ್ದು, ಚಿನ್ನಾಭರಣ ಹಾಗೂ ಇತರ ವಸ್ತುಗಳು ಕಳವಾದ ಬಗ್ಗೆ ವರದಿಯಾಗಿಲ್ಲ.
ಮಂಜೇಶ್ವರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.