ಅಶ್ರಫ್ 

ಕಾಸರಗೋಡು: ಯುಎಇಯ ರಾಸ್ ಅಲ್ ಖೈಮಾದಲ್ಲಿ ಬಸ್ ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟವರಲ್ಲಿ ಕಾಸರಗೋಡು ಜಿಲ್ಲೆಯ ಅಟ್ಟೆಂಗಾನ ನಿವಾಸಿ ಅಶ್ರಫ್ (53) ಕೂಡ ಸೇರಿದ್ದಾರೆ.

ನ.24ರಂದು ಮುಂಜಾನೆ ರಾಸ್ ಅಲ್ ಖೈಮಾದ ಅಲ್ ವತನ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿತ್ತು. ಓಮನ್ ಗೆ ವೀಸಾ ನವೀಕರಣಕ್ಕಾಗಿ ತೆರಳಿ ಮರಳುತ್ತಿದ್ದ 41 ಪ್ರಯಾಣಿಕರಿದ್ದ ಬಸ್, ತಾಂತ್ರಿಕ ದೋಷದಿಂದ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಲಾರಿಗೆ ಹಿಂದಿನಿಂದ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಅಪಘಾತದಲ್ಲಿ ಒಟ್ಟು 13 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಮೃತರಲ್ಲಿ 11 ಮಂದಿ ಭಾರತೀಯರು ಎಂದು ವರದಿಯಾಗಿದೆ.

ಅಶ್ರಫ್ ಅವರೊಂದಿಗೆ ಕಣ್ಣೂರು ಜಿಲ್ಲೆಯ ಮಟ್ಟನ್ನೂರು ನಿವಾಸಿ ಹೇಮಂತ್ ಪುದಿಯಕಾವಿಲ್ (29), ತಲಶ್ಶೇರಿ ನಿವಾಸಿ ಸಂಕೀರ್ತಾ ಸುರೇಶ್ (26) ಹಾಗೂ ಪಾಲಕ್ಕಾಡ್ ನಿವಾಸಿ ಮುಹಮ್ಮದ್ ಆಶಿಕ್ (29) ಕೂಡ ಮೃತಪಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸ್ಟೀಫನ್ ಕಯ್ಯಾರ್

contributor