ಮಡಿಕೇರಿ : ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ SIR (ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ) ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಶಾಸಕ ಮಂತರ್ ಗೌಡ ಆರೋಪಿಸಿದ್ದಾರೆ.

ನಗರದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, "ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೂತ್ ನಂಬರ್ 20 ಹಳೆಯ ಬೂತ್, 21 ಹೊಸ ಬೂತ್ ನಲ್ಲಿ 60-65 ಫಾರಂ 7 ನಲ್ಲಿ ಒಬ್ಬರೇ ವ್ಯಕ್ತಿ 10-10 ಫಾರಂಗಳಿಗೆ ಸಹಿ ಹಾಕಿದ್ದಾರೆ" ಎಂದು ದೂರಿದರು.

"ಈ ಕುರಿತು ನಮ್ಮ BLA ಮಾಹಿತಿ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಒಂದು ರೆಕಾರ್ಡಿಂಗ್ ನಲ್ಲಿ ಮಹಿಳೆಯೊಬ್ಬರು 'ಈ ಫಾರಂ ನಂಬರ್ 7 ಅನ್ನು ಪಕ್ಷದ ಕಚೇರಿಯಲ್ಲೇ ಕೊಟ್ಟರು' ಎಂದು ನೇರವಾಗಿ ಒಪ್ಪಿಕೊಂಡಿದ್ದಾರೆ. ಇದು ಬೇರೆ ಕಡೆಯೂ ನಡೆಯುತ್ತಿದೆ ಎಂಬುದು ಕಂಡುಬಂದಿದೆ" ಎಂದರು.

"ಚುನಾವಣಾ ಕಾಯ್ದೆಯ ಸೆಕ್ಷನ್ 30 ರ ಪ್ರಕಾರ ಇದು ಅಪರಾಧ. ಒಂದು ವರ್ಷ ಜೈಲು ಅಥವಾ ದಂಡ ಅಥವಾ ಎರಡೂ ಆಗಬಹುದು. ನಮ್ಮ ಪಕ್ಷದ ವತಿಯಿಂದ ನಾವೆಲ್ಲ ಹೋಗಿ ಚುನಾವಣಾಧಿಕಾರಿಗಳಿಗೆ ದೂರು ಕೊಡುತ್ತೇವೆ. ಮತ ಹಾಕುವುದು ನಮ್ಮ ಹಕ್ಕು ಮತ್ತು ಜವಾಬ್ದಾರಿ. ಅದನ್ನು ಉದ್ದೇಶಪೂರ್ವಕವಾಗಿ ರಾಜಕೀಯ ಲಾಭಕ್ಕಾಗಿ ದುರುಪಯೋಗಪಡಿಸಿಕೊಂಡರೆ ಯಾರೂ ಕ್ಷಮಿಸುವುದಿಲ್ಲ" ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಧರ್ಮಜ ಉತ್ತಪ್ಪ, ಮುಖಂಡರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor