ಶ್ರೀರಾಮುಲು

ಗಂಗಾವತಿ (ಕೊಪ್ಪಳ ಜಿ.): ರಾಜ್ಯದ ಈಗಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಬ್ಬ ವ್ಯಾಪಾರಸ್ಥ ಸಿಎಂ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಟೀಕಿಸಿದ್ದಾರೆ.

ಇಂದಿಲ್ಲಿ 6ನೇ ದಿನದ ಬಿಜೆಪಿಯ ಬಳ್ಳಾರಿ ಚಲೋ ಪಾದಯಾತ್ರೆಯ ವೇಳೆ ಮಾತನಾಡಿದ ಅವರು, ಇವರು ಎಲ್ಲವನ್ನೂ ವ್ಯಾಪಾರ ದೃಷ್ಟಿಯಿಂದ ಮುಖ್ಯಮಂತ್ರಿ ಎಂದು ಟೀಕಿಸಿದರು. ಜನಸೇವೆ ಎಂದರೇನು? ಕಲ್ಯಾಣ ಕರ್ನಾಟಕದ ಬಡವರು ಹೇಗಿದ್ದಾರೆ ಎಂಬ ಕಳಕಳಿ ಇಲ್ಲ; ಸಂಕಷ್ಟದಲ್ಲಿರುವ ಅವರಿಗೆ ಪರಿಹಾರ ಕೊಡಬೇಕೇ? ಎಂಬ ಯೋಚನೆ ಅವರಿಗೆ ಇಲ್ಲ ಎಂದು ದೂರಿದರು.

ಬೆಳಗ್ಗೆ ಎದ್ದರೆ ಸಾಕು; ಎಷ್ಟು ದುಡಿಯಬೇಕೆಂದು ಯೋಚಿಸುತ್ತಾರೆ. ವ್ಯಾಪಾರವೇ ಬೇರೆ; ಜನಸೇವೆಯೇ ಬೇರೆ ಎಂಬುದನ್ನು ತಿಳಿದುಕೊಳ್ಳಬೇಕೆಂದು ಹೇಳಿದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಜನರ ಸೇವೆ ಮಾಡುವ ವ್ಯಕ್ತಿಯಾಗಿದ್ದರು. ಅವರು ರಾಜೀನಾಮೆ ಕೊಡಲು ಎರಡು ತಿಂಗಳ ಸಮಯ ಕೇಳಿದ್ದರು ಎಂದು ಹೇಳಿದರು.

ಯಡಿಯೂರಪ್ಪ ಅವರೊಬ್ಬ ಶಕ್ತಿ ಎಂದ ಶ್ರೀರಾಮುಲು, ಜನಾರ್ದನ ರೆಡ್ಡಿಯವರ ತಾಕತ್ತಿನ ಬಗ್ಗೆ ನಾಗೇಂದ್ರ ಮಾತನಾಡುತ್ತಾರೆ ಎಂದು ಆಕ್ಷೇಪಿಸಿದರು. ಇವರನ್ನು ಲಘುವಾಗಿ ಪರಿಗಣಿಸದಿರಿ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor