ಕಾರಟಗಿ | ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಟೋರಿಕ್ಷಾ ಜಾಥಾ
ಕಾರಟಗಿ : ಪಟ್ಟಣದ ಆಟೋರಿಕ್ಷಾ ಚಾಲಕರ ಸಂಘದಿಂದ ಕರುನಾಡ ಹಬ್ಬದ ಅಂಗವಾಗಿ ಆಟೋ ರಿಕ್ಷಾಗಳಿಗೆ ಕನ್ನಡಾಂಬೆಯ ಧ್ವಜವನ್ನು ಕಟ್ಟಿ, ಹೂಮಾಲೆಗಳಿಂದ ಶೃಂಗರಿಸಿ ಪಟ್ಟಣದ ಎಪಿಎಂಸಿ'ಯಿಂದ ಆಟೋರಿಕ್ಷಾ ನಿಲ್ದಾಣ, ಮರ್ಲಾನಹಳ್ಳಿ ಗ್ರಾಮದವರೆಗೂ ಜಾಥಾ ಮಾಡುವ ಮೂಲಕ ಕನ್ನಡ ರಾಜ್ಯೋತ್ಸವಕ್ಕೆ ಮೆರುಗು ತರಲಾಯಿತು.
ಆಟೋರಿಕ್ಷಾ ಚಾಲಕರ ಸಂಘದ ಅಧ್ಯಕ್ಷರಾದ ಹನುಮಂತಪ್ಪ ಉಪ್ಪಾರ್ ಮಾತನಾಡಿ, ಕನ್ನಡ ಭಾಷೆ, ನಾಡು, ನುಡಿಗೆ ಆಟೋರಿಕ್ಷಾ ಚಾಲಕರ ಕೊಡುಗೆ ಅತ್ಯಮೂಲ್ಯವಾಗಿದೆ. ಅನೇಕ ಕನ್ನಡಪರ ಹೋರಾಟಗಳಲ್ಲಿ ಆಟೋಗಳೊಂದಿಗೆ ಚಾಲಕರು ಭಾಗವಹಿಸಿ ಹೋರಾಟಗಳನ್ನು ಯಶಸ್ವಿಗೊಳಿಸಿದ ಅನೇಕ ಉದಾಹರಣೆಗಳನ್ನು ಕಾಣಬಹುದು. ಕನ್ನಡ ಭಾಷೆಗಾಗಿ ನಾಡು ನುಡಿ ಜಲಕ್ಕಾಗಿ ಜೀವ ನೀಡಲು ನಾವೆಲ್ಲರೂ ಸಿದ್ದರಿದ್ದೇವೆ. ಜಾತಿ ಧರ್ಮ ಎನ್ನದೆ ಪ್ರಾಮಾಣಿಕವಾಗಿ ಜನರಿಗೆ ಸೇವೆ ಸಲ್ಲಿಸಿ ದುಡಿದ ತಿನ್ನುವ ಸೇವಕರು ನಾವಾಗಿದ್ದು, ಅಪ್ಪಟ ಕನ್ನಡ ಪ್ರೇಮಿಗಳಾಗಿ ಕಾರಟಗಿ ಪಟ್ಟಣದಲ್ಲಿ ನಮ್ಮ ಆಟೋ ಚಾಲಕರ ಸಂಘದಿಂದ ಬೃಹತ್ ಜಾಥಾ ಮಾಡುವ ಮೂಲಕ ಕರ್ನಾಟಕಕ್ಕೆ ಹಾಗೂ ಭಾಷೆಗೆ ಗೌರವ ನೀಡಲಾಗಿದೆ. ನಮ್ಮ ತನುಮನದಲ್ಲೂ ಕನ್ನಡ ಅಚ್ಚಳಿಸದೆ ಉಳಿಯಲಿ ಎಂದರು.
ಸಂಘದ ಉಪಾಧ್ಯಕ್ಷರಾದ ಯಮನೂರ, ಗೌರವ ಅಧ್ಯಕ್ಷರಾದ ಅಶುಬಾಯ್, ಖಜಾಂಚಿ ಮಂಜುನಾಥ, ಸದಸ್ಯರಾದ ಶಿವರಾಜ, ವಿಶ್ವ, ಸಂತೋಷ, ನಾಗರಾಜ, ನಾಗರಾಜ ಕಂಪ್ಲಿ, ಬಂಗಾರಿ, ಶರಣಪ್ಪ ನಾಗನಕಲ್, ಶರಣಪ್ಪ ರಾಮನಗರ, ಮಹಾದೇವ, ಮಂಜುನಾಥ, ವೀರಭದ್ರಪ್ಪ ಸೇರಿದಂತೆ ಅನೇಕರು ಇದ್ದರು.