ಕುಕನೂರು: ಪಟ್ಟಣದ ಶ್ರೀ ಗವಿಸಿದ್ದೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿನಿ ಕು. ಸುಷ್ಮಾ ಹೊನ್ನುಂಚಿ ಚಕ್ರ ಎಸೆತ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು, ಕ್ರೀಡೆಯಲ್ಲಿ ಇನ್ನಷ್ಟು ಸಾಧನೆ ಮಾಡಲಿ ಎಂದು ಗೋರ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಬಳೂಟಗಿ ಶುಭ ಹಾರೈಸಿದರು.

ಗೋರ ಸೇನಾ ವತಿಯಿಂದ ವಿದ್ಯಾರ್ಥಿನಿಯನ್ನು ಸನ್ಮಾನಿಸಿ ಮಾತನಾಡಿದ ಅವರು, ಕಕ್ಕಿಹಳ್ಳಿ ತಾಂಡಾದ ಸಾಮಾನ್ಯ ಕುಟುಂಬದ ಲಕ್ಷ್ಮೀ ಹಾಗೂ ಆನಂದ ಹೊನ್ನುಂಚಿ ದಂಪತಿಯ ಹಿರಿಯ ಪುತ್ರಿ ಸುಷ್ಮಾ, ವಿದ್ಯಾಭ್ಯಾಸದ ಜತೆಗೆ ಕ್ರೀಡೆಯಲ್ಲೂ ಸಾಧನೆ ಮಾಡಿರುವುದು ಶ್ಲಾಘನೀಯ. ಕಠಿಣ ಪರಿಶ್ರಮ, ನಿರಂತರ ಅಭ್ಯಾಸ ಹಾಗೂ ಶಿಕ್ಷಕರ ಮಾರ್ಗದರ್ಶನದಿಂದ ಸಾಧನೆ ಸಾಧ್ಯ. ಬಡತನವು ಸಾಧನೆಗೆ ಅಡ್ಡಿಯಾಗಬಾರದು ಎಂದು ಹೇಳಿದರು.

ಗವಿಸಿದ್ದೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು ಹಿಂದಿನಿಂದಲೂ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಸಾಧನೆ ಮಾಡುತ್ತಿದ್ದು, ಇದಕ್ಕೆ ಆಡಳಿತ ಮಂಡಳಿ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ರಾಜು ರಾಠೋಡ ಅವರ ಪರಿಶ್ರಮ ಕಾರಣವಾಗಿದೆ. ಸುಷ್ಮಾ ಮುಂದಿನ ದಿನಗಳಲ್ಲಿ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲೂ ಸಾಧನೆ ಮಾಡಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಮಾನವ್ವ ತಲ್ಲೂರು, ಶಿವನವ್ವ ಹೊನ್ನುಂಚಿ, ಮಂಜುನಾಥ ಹೊನ್ನುಂಚಿ, ರಾಘವೇಂದ್ರ ಬಳಗೇರಿ, ಸೋಮಪ್ಪ ಕಾರಭಾರಿ, ಕಿರಣ ರಾಠೋಡ, ನಾಗರಾಜ ಭಾನಾಪುರ, ಮಹೇಶ ಕಾರಭಾರಿ, ವಿಜಯ ಚವ್ಹಾಣ, ರವಿ ಕಟ್ಟಿಮನಿ, ಚಂಗುಮಣಿ ಮನ್ನಾಪುರ, ಉಮೇಶ ಬಳಗೇರಿ, ಮಂಜುನಾಥ ಗೆದಗೇರಿ, ರುದ್ರಯ್ಯ, ಶರಣಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor