ಕೊಪ್ಪಳ : ರಾಜಕೀಯವಾಗಿ ಪರಸ್ಪರ ವಿರೋಧಿಗಳಾಗಿದ್ದ ಸಚಿವ ಶಿವರಾಜ್ ತಂಗಡಗಿ ಹಾಗೂ ಮಾಜಿ ಶಾಸಕ ಬಸವರಾಜ ದಡೇಸೂಗೂರು ಆತ್ಮೀಯವಾಗಿ ಭೇಟಿಯಾಗಿದ್ದಾರೆ.

ಸಚಿವ ಶಿವರಾಜ್‌ ತಂಗಡಗಿ ಅವರು ತಮ್ಮ ಪುತ್ರ ಶಶಾಂಕ್ ಅವರ ವಿವಾಹದ ಆಮಂತ್ರಣ ನೀಡಲು ಕಾರಟಗಿಯ ಬಿಜೆಪಿ ಕಚೇರಿಗೆ ಸ್ವತಃ ತೆರಳಿದ್ದಾರೆ. ಈ ವೇಳೆ ಮಾಜಿ ಶಾಸಕ ದಡೇಸೂಗೂರು ಸಚಿವರನ್ನು ಆತ್ಮೀಯವಾಗಿ ಬರಮಾಡಿಕೊಂಡು ಸನ್ಮಾನಿಸಿದ್ದಾರೆ.

ವರ್ಷಗಳ ಮುನಿಸು ಮರೆತು ಇಬ್ಬರೂ ನಾಯಕರು ಪರಸ್ಪರ ಕೈಕುಲುಕಿ, ಉಭಯ ಕುಶಲೋಪರಿ ವಿಚಾರಿಸಿಕೊಂಡಿದ್ದಾರೆ. ಡಿಸೆಂಬರ್ 3ರಂದು ನಡೆಯಲಿರುವ ಪುತ್ರನ ವಿವಾಹಕ್ಕೆ ಸಚಿವರು ಖುದ್ದಾಗಿ ಆಹ್ವಾನ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಹೊನ್ನೂರು ಹುಸೇನ್

contributor