×
Ad

ಚಿಕ್ಕಬಳ್ಳಾಪುರ | ಗುಡಿಬಂಡೆಯಲ್ಲಿ ಚಿಕ್ಕಪ್ಪನಿಂದ ಅಣ್ಣನ ಮಗನ ಗುಂಡಿಕ್ಕಿ ಹತ್ಯೆ

Update: 2024-07-24 09:52 IST

ನಝೀರ್ ಅಹ್ಮದ್ ಸಾಬ್

ಗುಡಿಬಂಡೆ, ಜು.24: ವ್ಯಕ್ತಿಯೋರ್ವ ಸ್ವಂತ ಅಣ್ಣನ ಮಗನನ್ನೇ ಗುಂಡಿಕ್ಕಿ ಕೊಲೆಗೈದ ಘಟನೆ ಇಂದು ಮುಂಜಾನೆ ಗುಡಿಬಂಡೆ ತಾಲೂಕಿನ ಹಂಪಸಂದ್ರ ಗ್ರಾಮದಲ್ಲಿ ನಡೆದಿದೆ. ಇದೇ ವೇಳೆ ಆರೋಪಿ ಮೃತರ ತಂದೆಯ ಮೇಲೂ ಮಾರಕಾಸ್ತ್ರದಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಸ್ಥಳೀಯ ನಿವಾಸಿ ಮಾಬೂಸಾಬಿ ಎಂಬವರ ಪುತ್ರ ನಝೀರ್ ಅಹ್ಮದ್ ಸಾಬ್(60) ಕೊಲೆಯಾದ ವ್ಯಕ್ತಿ. ಮಾಬೂಸಾಬಿ ಅವರ ತಮ್ಮ ಬಹೀರ್ ಅಹ್ಮದ್ ಕೊಲೆ ಆರೋಪಿಯಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ತಾಲೂಕಿನ ಹಂಪಸಂದ್ರ ಗ್ರಾಮದಲ್ಲಿ ಇಂದು ಬೆಳಗ್ಗೆ ಘಟನೆ ನಡೆದಿದೆ. ನಝೀರ್ ಸಾಬ್ ಅವರು ತಂದೆ ಮಾಬೂಸಾಬಿ ಜೊತೆ ಎಂದಿನಂತೆ ಇಂದು ಮುಂಜಾನೆ ನಮಾಝ್ ಮಾಡಲು ಮಸೀದಿಗೆ ತೆರಳುತ್ತಿದ್ದ ವೇಳೆ ಎದುರಿಗೆ ಬಂದ ಬಹೀರ್ ಅಹ್ಮದ್ ಪಿಸ್ತೂಲ್ ನಿಂದ ನಝೀರ್ ಅವರಿ ಗೆ ಗುಂಡಿಕ್ಕಿದ್ದಾನೆ. ಬಳಿಕ ಮಾರಕಾಸ್ತ್ರದಿಂದ ಮಾಬೂಸಾಬಿ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಗುಂಡಿನ ದಾಳಿಗೆ ತುತ್ತಾದ ನಝೀರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಗಂಭೀರವಾಗಿ ಗಾಯಗೊಂಡಿರುವ ಮಾಬೂಸಾಬಿ ಅವರಿಗೆ ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗುಡಿಬಂಡೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ಬಹೀರ್ ಅಹ್ಮದ್ ನನ್ನು ವಶಕ್ಕೆ ಪಡೆದಿದ್ದಾರೆ.

ಸೌದಿ ಅರಬಿಯದಲ್ಲಿ ಕೆಲಸ ಮಾಡುತ್ತಿದ್ದ ಬಹೀರ್ ಅಹ್ಮದ್ ಇತ್ತೀಚೆಗಷ್ಟೇ ಊರಿಗೆ ಆಗಮಿಸಿದ್ದ ಎಂದು ತಿಳಿದುಬಂದಿದೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News