ಶುಂಠಿಯಿಂದ ಕ್ಯಾಮಮೈಲ್ವರೆಗೆ ಈ ಮುಂಗಾರು ಋತುವಿನಲ್ಲಿ ಆರೋಗ್ಯ, ಮನೋಭಾವ ಮತ್ತು ಒಟ್ಟು ಸುಖಕ್ಕಾಗಿ ನೀವು ಸೇವಿಸಬಹುದಾದ ಗಿಡಮೂಲಿಕೆ ಚಹಾಗಳ ವಿಶೇಷ ಆಯ್ಕೆ ಇಲ್ಲಿದೆ,

ಮಳೆಗಾಲದ ತಂಪಿಗೆ ಬೆಚ್ಚಗಿನ ಚಹಾ ಕಪ್ ಮಾತ್ರವಲ್ಲ, ಅದರಲ್ಲಿ ಬೆರೆಸಿರುವ ಗಿಡಮೂಲಿಕೆಗಳು ದೇಹ- ಮನಸ್ಸಿಗೆ ಹೊಸ ಚೈತನ್ಯ ನೀಡುತ್ತವೆ. ಶುಂಠಿಯ ಉಷ್ಣತೆ, ಲೆಮನ್ಗ್ರಾಸ್ನ ತಾಜಾತನ, ಅರಿಶಿಣದ ಆರೋಗ್ಯಕರ ಸ್ಪರ್ಶ ಪುದೀನದ ಶೀತಲತೆ ಮತ್ತು ಕ್ಯಾಮಮೈಲ್ನ ಶಾಂತಗೊಳಿಸುವ ಗುಣಗಳೆಲ್ಲವೂ ಸೇರಿ ಈ ಋತುವನ್ನು ಇನ್ನಷ್ಟು ಉಲ್ಲಾಸಕರಗೊಳಿಸುತ್ತವೆ.

ಮುಂಗಾರು ಋತುವಿನಲ್ಲಿ ತಂಪಾದ ಹವಾಮಾನದಲ್ಲಿ ಬೆಚ್ಚಗಿನ ಅನುಭವ ಬೇಕಾಗುತ್ತದೆ. ಆದರೆ ಏನು ತಿನ್ನಬೇಕು ಎಂದು ನಿರ್ಧರಿಸುವ ಮೊದಲು ಈ ಮಾಹಿತಿಯನ್ನು ಓದಿ. ದೈನಂದಿನ ಆಹಾರ ಕ್ರಮದಲ್ಲಿ ವೈವಿಧ್ಯತೆ ಸೇರಿಸಲು ಇಲ್ಲಿದೆ ಸರಳ ಮಾರ್ಗ. ವಿಶೇಷವಾಗಿ ಶುಂಠಿ, ಲೆಮೆನ್ಗ್ರಾಸ್, ಅರಿಶಿಣ, ಪುದೀನ ಮತ್ತು ಕ್ಯಾಮಮೈಲ್ನಂತಹ ಗಿಡಮೂಲಿಕೆಗಳನ್ನು ಚಹಾದ ಜೊತೆಗೆ ಬೆರೆಸಿದಾಗ ಆರೋಗ್ಯಕರವಾಗಿಯೂ, ರುಚಿಕರವಾಗಿಯೂ ಇರುತ್ತದೆ. ಚೆರಿಸ್ ಇಂಡಿಯಾದ ಸಂಸ್ಥಾಪಕರಾದ ಮತ್ತು ಚಹಾ ವಿಶೇಷಜ್ಞರೂ ಆಗಿರುವ ಪರಿಮಲ್ ಶಾ ಮಳೆಗಾಲದ ದಿನಚರಿಯನ್ನು ಉಲ್ಲಾಸಕರಗೊಳಿಸುವ ಐದು ಚಹಾ ಮಿಶ್ರಣಗಳನ್ನು ಹಂಚಿಕೊಂಡಿದ್ದಾರೆ.

ಬೆಳಗಿನ ಬೆಚ್ಚಗಿನ ಆರಂಭಕ್ಕೆ ಶುಂಠಿ ಚಹಾ

ತಲೆಮಾರುಗಳಿಂದ ಶುಂಠಿಯನ್ನು ಜೀರ್ಣಕ್ರಿಯೆಗೆ ಸಹಕರಿಸಲು ಮತ್ತು ವಾಕರಿಕೆ ನಿವಾರಿಸಲು ಬಳಸಲಾಗುತ್ತಿದೆ. ಮಳೆಗಾಲದಲ್ಲಿ ಅದು ಇನ್ನಷ್ಟು ಆಕರ್ಷಕವೆನಿಸುತ್ತದೆ. ತಂಪಾದ ಮಳೆಯಿಂದ ಕೂಡಿದ ದಿನದಾರಂಭದಲ್ಲಿ ಬಿಸಿ ಶುಂಠಿ ಚಹಾ ಹಿತಕರವಾಗಿರುತ್ತದೆ. ಅದಕ್ಕೆ ದಾಲ್ಚಿನ್ನಿ, ಕರಿಮೆಣಸು ಮತ್ತು ಶುಂಠಿಯ ಮಿಶ್ರಣವು ಪರಿಪೂರ್ಣ ಆಯ್ಕೆಯಾಗಿದೆ.

ತಾಜಾತನಕ್ಕಾಗಿ ಲೆಮನ್ಗ್ರಾಸ್ ಚಹಾ

ಲೆಮನ್ಗ್ರಾಸ್ನ ವಿಶಿಷ್ಟವಾದ ನಿಂಬೆ ಮತ್ತು ಮಣ್ಣಿನ ಪರಿಮಳ ಚಹಾವನ್ನು ಹಗುರ ಮತ್ತು ಉಲ್ಲಾಸಮಯವಾಗಿಸುತ್ತದೆ. ಪರಿಮಲ್ ಅವರ ಪ್ರಕಾರ ನಿಜವಾದ ನಿಂಬೆ ಮತ್ತು ಲೆಮನ್ಗ್ರಾಸ್ ಬೆರೆಸಿದ ಗ್ರೀನ್ ಟೀ ಮಧ್ಯಾಹ್ನದ ವಿರಾಮಕ್ಕೆ ಸೂಕ್ತವಾಗಿದೆ. ಹೆಚ್ಚು ಸುವಾಸನೆಯಿಲ್ಲದ ಪರಿಮಳಯುಕ್ತ ಏನನ್ನಾದರೂ ಬಯಸಿದಾಗ ಲೆಮನ್ಗ್ರಾಸ್ ಟೀ ಉತ್ತಮ.

ಅರಿಶಿಣ ಮತ್ತು ಶುಂಠಿಯ ಮಸಾಲೆ ಚಹಾ

ಕರ್ಕ್ಯುಮಿನ್ ಇರುವ ಮಸಾಲೆಯಾಗಿದೆ ಅರಿಶಿಣ. ಇದು ಆಂಟಿ ಆಕ್ಸಿಡಂಟ್ ಮತ್ತು ಉರಿಯೂತ ವಿರೋಧಿ ಗುಣವನ್ನು ಹೊಂದಿದೆ. ಅರಿಶಿಣ ಮತ್ತು ಸೂರ್ಯನ ಬೆಳಕಲ್ಲಿ ಒಣಗಿಸಿದ ಶುಂಠಿ ಬೆರೆಸಿದ ಗ್ರೀನ್ ಟೀ ಸಂಯೋಜನೆಯು ಮೋಡಕವಿದ ಮತ್ತು ಶೀತದ ವಾತಾವರಣಗಳಿಗೆ ಸೂಕ್ತವೆನಿಸುತ್ತದೆ.

ತಾಜಾ ಪುದೀನ ಮತ್ತು ಶುಂಠಿ ಚಹಾ

ಮಸಾಲೆಯುಕ್ತ ಆಹಾರ ಸೇವಿಸಿದ ನಂತರ ಪುದೀನ ಹಿತಕರವಾಗಿರುತ್ತದೆ ಎನ್ನುತ್ತಾರೆ ಪರಿಮಲ್. ಗ್ರೀನ್ ಟೀ, ಪುದೀನ, ಶುಂಠಿ ಮತ್ತು ಲೆಮನ್ಗ್ರಾಸ್ ತಾಜಾ ಸಂಯೋಜನೆ ಉತ್ತಮ ತಾಜಾ ರುಚಿ ನೀಡುತ್ತದೆ. ತಂಪಾಗಿಸುವಿಕೆ ಮತ್ತು ನಿಂಬೆಯ ಗುಣವನ್ನು ಒದಗಿಸುತ್ತದೆ.

ಶಾಂತ ಸಂಜೆಗೆ ಕ್ಯಾಮಮೈಲ್ ಚಹಾ

ಕ್ಯಾಮಮೈಲ್ ಎನ್ನುವುದು ಸುವಾಸನೆಯುಳ್ಳ ಎಲೆ ಮತ್ತು ಹೂ ಬಿಡುವ, ಆಂಥೆಮಿಸ್‍ ಯಾ ಮ್ಯಾಟ್ರಿಕೇರಿಯ ಕುಲಕ್ಕೆ ಸೇರಿದ, ಔಷಧವಾಗಿ ಬಳಸುವ, ಯೂರೋಪಿನ ಒಂದು ಗಿಡ. ಬೆಚ್ಚಗಿನ ಕ್ಯಾಮಮೈಲ್ ಪಾನೀಯವು ವಿಶ್ರಾಂತಿಯ ಅಥವಾ ಮಲಗುವ ಸಮಯದಲ್ಲಿ ಸೇವಿಸಲು ಉತ್ತಮ. ಕ್ಯಾಮಮೈಲ್ ಅನ್ನು ಸಾಮಾನ್ಯವಾಗಿ ಸಂಜೆ ಆನಂದಿಸಲಾಗುತ್ತದೆ. ಮಳೆಗಾಲದ ವಿಶ್ರಾಂತ ಸ್ಥಿತಿಗೆ ಜೇನುತುಪ್ಪದ ಮಿಶ್ರಣದ ಜೊತೆಗೆ ಈ ಕ್ಯಾಮಮೈಲ್ ಗ್ರೀನ್ ಟೀ ಉತ್ತಮವಾಗಬಹುದು.

ಆರೋಗ್ಯಕರ ಮುಂಗಾರು ಎಂದರೆ ನಿಮ್ಮ ಕಪ್ಗೆ ಏನು ಬೆರೆಸುತ್ತಿದ್ದೀರಿ ಎನ್ನುವುದು ಮುಖ್ಯವಾಗುತ್ತದೆ. ಹೈಡ್ರೇಶನ್, ಸಮತೋಲಿತ ಆಹಾರ, ಸೂಕ್ತ ನಿದ್ರೆ, ಕೈ ತೊಳೆಯುವುದು ಮತ್ತು ವೈದ್ಯಕೀಯ ಆರೈಕೆ ಪಡೆಯುವುದು ಮಳೆಗಾಲದ ಉದ್ದಕ್ಕೂ ಗಮನಾರ್ಹವಾಗಿ ಉಳಿಯುತ್ತದೆ. ಗಿಡಮೂಲಿಕೆ ಚಹಾ ಸೇವನೆ ನಿಮ್ಮ ಸಾಂಪ್ರದಾಯಿಕ ಆರೋಗ್ಯ ದಿನಚರಿಗಳಿಗೆ ಉತ್ತಮ ಸೇರ್ಪಡೆಯಾಗಲಿದೆ.

ಕೃಪೆ: hindustantimes.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor