Mandya | ಕಾರು ಹರಿದು ಬಾಲಕ ಮೃತ್ಯು
ಸಾಂದರ್ಭಿಕ ಚಿತ್ರ
ಮಂಡ್ಯ : ಕಾರು ಹರಿದು ನಾಲ್ಕು ವರ್ಷದ ಬಾಲಕ ಮೃತಪಟ್ಟ ಘಟನೆ ಮದ್ದೂರು ತಾಲೂಕಿನ ಯರಗನಹಳ್ಳಿ ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ.
ಸಂಪತ್ ಕುಮಾರ್ ಎಂಬವರ ಪುತ್ರ ಚಂದನ್ ಗೌಡ ಮೃತಪಟ್ಟ ಬಾಲಕ. ಈ ಸಂಬಂಧ ಕೆಸ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳವಾರ ಆಯುಧ ಪೂಜೆ ಹಿನ್ನೆಲೆಯಲ್ಲಿ ಕಾರನ್ನು ತೊಳೆದು ಪೂಜೆ ಸಲ್ಲಿಸುವ ಸಂದರ್ಭದಲ್ಲಿ ಕಾರಿನ ಹಿಂದೆ ಬಾಲಕ ನಿಂತಿರುವುದನ್ನು ಗಮನಿಸದೆ ಕಾರನ್ನು ಹಿಂದಕ್ಕೆ ತೆಗೆದಾಗ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.