ಮಂಗಳೂರು: ಬೀದಿಬದಿ ಆಹಾರ ಮಳಿಗೆಗಳ ಮೇಲೆ ಎಂಸಿಸಿ ದಾಳಿ; ಅಜಿನೊಮೊಟೊ ಬಳಕೆ ಪತ್ತೆ
ಆರೋಗ್ಯಕ್ಕೆ ಹಾನಿಕರ ವಸ್ತುಗಳನ್ನು ಆಹಾರ ತಯಾರಿಕೆಯಲ್ಲಿ ಬಳಸಿದರೆ ಕಾನೂನು ಕ್ರಮದ ಎಚ್ಚರಿಕೆ
Photo: x.com/mangalurucorp
ಮಂಗಳೂರು: ಆಹಾರ ಸುರಕ್ಷತೆ ಹಾಗೂ ಸಾರ್ವಜನಿಕ ಆರೋಗ್ಯ ರಕ್ಷಣೆಯ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ (ಎಂಸಿಸಿ) ಆರೋಗ್ಯ ಅಧಿಕಾರಿಗಳ ತಂಡವು ಬಿಜೈ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಸಮೀಪದ ಬೀದಿಬದಿ ಆಹಾರ ಮಳಿಗೆಗಳ ಮೇಲೆ ತಪಾಸಣೆ ನಡೆಸಿ, ಆರೋಗ್ಯಕ್ಕೆ ಹಾನಿಕರವೆಂದು ಪರಿಗಣಿಸಲಾದ ಅಜಿನೊಮೊಟೊ (Ajinomoto) ವಶಪಡಿಸಿಕೊಂಡಿದೆ.
ತಪಾಸಣೆ ವೇಳೆ ಕೆಲವು ಆಹಾರ ಮಳಿಗೆಗಳಲ್ಲಿ ನಿಯಮಬಾಹಿರವಾಗಿ ಅಜಿನೊಮೊಟೊ ಬಳಸಲಾಗುತ್ತಿರುವುದು ಪತ್ತೆಯಾಗಿದ್ದು, ಅಧಿಕಾರಿಗಳು ಅದನ್ನು ಜಪ್ತಿ ಮಾಡಿದ್ದಾರೆ. ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಳಿ ನಿಷೇಧಿತ ಕೃತಕ ಬಣ್ಣ ಬಳಸುತ್ತಿದ್ದ 3 ಬೀದಿ ಬದಿ ಆಹಾರ ಮಳಿಗೆಗಳಿಗೆ ಆರೋಗ್ಯ ಅಧಿಕಾರಿಗಳು 6,000 ರೂ. ದಂಡ ವಿಧಿಸಿದ್ದಾರೆ.
ಈ ಸಂದರ್ಭದಲ್ಲಿ ಆಹಾರ ನೈರ್ಮಲ್ಯ ಮತ್ತು ಆಹಾರ ಸುರಕ್ಷತಾ ನಿಯಮಗಳನ್ನು ಎಲ್ಲ ಆಹಾರ ವ್ಯಾಪಾರಿಗಳು ಕಡ್ಡಾಯವಾಗಿ ಪಾಲಿಸಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.
ನಿಯಮ ಉಲ್ಲಂಘಿಸಿ ಆರೋಗ್ಯಕ್ಕೆ ಹಾನಿಕರ ವಸ್ತುಗಳನ್ನು ಆಹಾರ ತಯಾರಿಕೆಯಲ್ಲಿ ಬಳಸುವವರ ವಿರುದ್ಧ ಆಹಾರ ಸುರಕ್ಷತಾ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
🚨 MCC ಆರೋಗ್ಯ ಅಧಿಕಾರಿಗಳಿಂದ ಅಜಿನೊಮೊಟೊ ಜಪ್ತಿ!
— ಮಂಗಳೂರು ಮಹಾನಗರ ಪಾಲಿಕೆ | Mangaluru City Corporation (@mangalurucorp) July 23, 2026
ಆಹಾರ ಸುರಕ್ಷತೆಯ ಅಂಗವಾಗಿ ಬಿಜೈ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿಯ ಬೀದಿ ಬದಿ ಆಹಾರ ಮಳಿಗೆಗಳ ಮೇಲೆ ಮಂಗಳೂರು ಮಹಾನಗರ ಪಾಲಿಕೆ (MCC) ಅಧಿಕಾರಿಗಳು ದಾಳಿ ನಡೆಸಿ, ಆರೋಗ್ಯಕ್ಕೆ ಹಾನಿಕರವಾದ ‘ಅಜಿನೊಮೊಟೊ’ ವಶಪಡಿಸಿಕೊಂಡಿದ್ದಾರೆ. ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮದ ಎಚ್ಚರಿಕೆ. pic.twitter.com/ghpAcxWpqZ
🚨 ಸ್ಟೇಟ್ ಬ್ಯಾಂಕ್ ವ್ಯಾಪ್ತಿಯಲ್ಲಿ ಆಹಾರ ಮಳಿಗೆಗಳ ಮೇಲೆ ದಾಳಿ!
— ಮಂಗಳೂರು ಮಹಾನಗರ ಪಾಲಿಕೆ | Mangaluru City Corporation (@mangalurucorp) July 23, 2026
ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಳಿ ನಿಷೇಧಿತ ಕೃತಕ ಬಣ್ಣ ಬಳಸುತ್ತಿದ್ದ 3 ಬೀದಿ ಬದಿ ಆಹಾರ ಮಳಿಗೆಗಳಿಗೆ ಆರೋಗ್ಯ ಅಧಿಕಾರಿಗಳು ₹6,000 ದಂಡ ವಿಧಿಸಿದ್ದಾರೆ. ನಿಯಮ ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮದ ಎಚ್ಚರಿಕೆ ನೀಡಲಾಗಿದೆ.#CleanMangaluru #Foodsafety pic.twitter.com/if4znEZlcW