ಇನ್ಫೋಸಿಸ್ ಮೈಸೂರು ಕ್ಯಾಂಪಸ್‌ನಲ್ಲಿ ಮಹಿಳಾ ಪತ್ರಕರ್ತೆಯರಿಗೆ ಡಿಜಿಟಲ್ ತರಬೇತಿ ಶಿಬಿರ
ಬೆಂಗಳೂರು : ಕರ್ನಾಟಕ ಮಾಧ್ಯಮ ಅಕಾಡೆಮಿ ಮತ್ತು ಇನ್ಫೋಸಿಸ್ ಸ್ಪ್ರಿಂಗ್‌ಬೋರ್ಡ್ ಸಹಯೋಗದಲ್ಲಿ 'ನಾಯಕತ್ವ ಸಬಲೀಕರಣ ಮತ್ತು ಡಿಜಿಟಲ್ ತರಬೇತಿ ಕಾರ್ಯಕ್ರಮʼವನ್ನು ಇತ್ತೀಚೆಗೆ ಇನ್ಫೋಸಿಸ್‌ನ ಮೈಸೂರು ಕ್ಯಾಂಪಸ್‌ನಲ್ಲಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ 60ಕ್ಕೂ ಹೆಚ್ಚು ಮಹಿಳಾ ಪತ್ರಕರ್ತೆಯರು ಭಾಗವಹಿಸಿದ್ದರು.
ಇದು ಮಾಧ್ಯಮ ಅಕಾಡೆಮಿ ಮತ್ತು ಇನ್ಫೋಸಿಸ್ ನಡೆಸಿರುವ 3ನೇ ಬ್ಯಾಚ್‌ನ ತರಬೇತಿ ಕಾರ್ಯಕ್ರಮವಾಗಿದೆ. ಅಕಾಡೆಮಿಯ ಈ ಉಪಕ್ರಮದಡಿ ಇಲ್ಲಿಯವರೆಗೆ ಒಟ್ಟಾರೆಯಾಗಿ ಸುಮಾರು 150 ಪತ್ರಕರ್ತರಿಗೆ ತರಬೇತಿ ನೀಡಲಾಗಿದೆ. ಈ ಹಿಂದಿನ ತರಬೇತಿ ಶಿಬಿರಗಳನ್ನು ಇನ್ಫೋಸಿಸ್‌ನ ಮೈಸೂರು ಹಾಗೂ ಮಂಗಳೂರು ಕ್ಯಾಂಪಸ್‌ಗಳಲ್ಲಿ ನಡೆಸಲಾಗಿತ್ತು.