ಮೈಸೂರು : ರಾಜ್ಯದಲ್ಲಿ ಪೆಟ್ರೋಲ್‌ಗೆ ಎಥೆನಾಲ್ ಮಿಶ್ರಣದ ಬಗ್ಗೆ ಕೇಂದ್ರ ಸರಕಾರಕ್ಕೆ ನಾಳೆ ಅಧಿಕೃತ ವರದಿ ಸಲ್ಲಿಸುತ್ತಿದ್ದೇನೆ ಎಂದು ಆಹಾರ ಇಲಾಖೆ ಸಚಿವ ರಿಝ್ವಾನ್ ಅರ್ಶದ್ ತಿಳಿಸಿದರು.

ಮೈಸೂರಿನಲ್ಲಿ ಸೋಮವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದ 6 ಪೆಟ್ರೋಲಿಯಂ ಟರ್ಮಿನಲ್ ಗಳಲ್ಲಿ ಎಥೆನಾಲ್ ಹೆಚ್ಚಿನ ಮಿಶ್ರಣ ಆಗುತ್ತದೆ. ಇದರ ತಾಂತ್ರಿಕ ವರದಿ ಪ್ರಯೋಗಾಲಯ ವರದಿ ಎಲ್ಲವನ್ನೂ ಸೇರಿಸಿ ವರದಿ ಕೊಡುತ್ತೇನೆ. ನಮ್ಮ ಸರಕಾರದ ವರದಿ ಮೇಲೆ ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕು. ಕೇಂದ್ರ ಸರಕಾರ ಕ್ರಮ ಕೈಗೊಳ್ಳದಿದ್ದರೆ ನಾವು ನಮ್ಮ ವ್ಯಾಪ್ತಿಯಲ್ಲೇ ಕ್ರಮ ಕೈಗೊಳ್ಳುತ್ತೇವೆ. ಇದು ಪೆಟ್ರೋಲ್ ಬಂಕ್ ನವರ ಸಮಸ್ಯೆಯಲ್ಲ. ಪೆಟ್ರೋಲ್ ಬಂಕ್ ನವರು ಎಥೆನಾಲ್ ಮಿಶ್ರಣ ಮಾಡಲು ಬರುವುದಿಲ್ಲ. ಇದು ಪೆಟ್ರೋಲ್ ಬಂಕ್ ಗೆ ಬರುವ ಪೆಟ್ರೋಲ್ ಟರ್ಮಿನಲ್ ಗಳ ಸಮಸ್ಯೆ. ಅಧಿಕ ಎಥೆನಾಲ್ ಮಿಶ್ರಣದಿಂದ ಜನ ಸಾಮಾನ್ಯರಿಗೆ ಮಾತ್ರ ಅಲ್ಲ. ಪೆಟ್ರೋಲ್ ಬಂಕ್ ಗೆ ಸಮಸ್ಯೆಯಾಗುತ್ತಿದೆ. ಇದನ್ನ ನಾವು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದರು.

 12 ಅಂಗಡಿಗಳ ಮೇಲೆ ಕ್ರಮ ಕೈಗೊಂಡಿದ್ದೇವೆ

ಇ-ಕೆವೈಸಿಗೆ ಅನ್ನ ಸೇವೆ ಆ್ಯಪ್ ನಿಂದಾಗಿ ಲಕ್ಷಾಂತರ ಜನರಿಗೆ ಅನುಕೂಲ ಆಗಿದೆ. ಬಹಳ ಮುಖ್ಯವಾಗಿ ಕೆಲಸ ನಿಮಿತ್ತ ಊರು ಬಿಟ್ಟವರಿಗೆ ಇದರ ಅನುಕೂಲ ಆಗುತ್ತಿದೆ. ಮೊದಲು ಆ್ಯಪ್ ನ ವ್ಯಾಪ್ತಿ ರಾಜ್ಯಕ್ಕೆ ಇತ್ತು. ಈಗ ಅದನ್ನ ದೇಶ ವ್ಯಾಪ್ತಿಗೆ ವಿಸ್ತರಿಸಿದ್ದೇವೆ. ಇದರಿಂದ ಹೊರ ರಾಜ್ಯಗಳಿಗೆ ಹೋಗಿರುವ ಕಾರ್ಮಿಕರಿಗೆ ಅನುಕೂಲ ಆಗುತ್ತಿದೆ. ಇ-ಕೆವೈಸಿಗೆ ಕೆಲವು ಅಂಗಡಿಗಳಲ್ಲಿ ಹಣ ಕೇಳಿರುವುದು ಸತ್ಯ. ಹಣ ಕೇಳಿದ ಸುಮಾರು 12  ಅಂಗಡಿಗಳ ಮೇಲೆ ಕ್ರಮ ಕೈಗೊಂಡಿದ್ದೇವೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನೇರಳೆ ಸತೀಶ್ ಕುಮಾರ್/ವಾರ್ತಾಭಾರತಿ

contributor

ನೇರಳೆ ಸತೀಶ್ ಕುಮಾರ್ ಅವರು ಕಳೆದ 20 ವರ್ಷಗಳಿಂದ ಪತ್ರಿಕೋದ್ಯಮ‌ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ನಂಜನಗೂಡಿನಿಂದ ಪತ್ರಿಕೋದ್ಯಮ ಆರಂಭಿಸಿದ ಅವರು, ಮೈಸೂರು, ಬೆಂಗಳೂರು ನಗರಗಳಲ್ಲಿ ಹಲವಾರು ಜಿಲ್ಲಾ ಮತ್ತು ರಾಜ್ಯಮಟ್ಟದ ಪತ್ರಿಕೆಗಳಲ್ಲಿ ವರದಿಗಾರ ಮತ್ತು ಉಪ ಸಂಪಾದಕನಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಕಳೆದ 9 ವರ್ಷಗಳಿಂದ ವಾರ್ತಾಭಾರತಿ ಪತ್ರಿಕೆಯಲ್ಲಿ ಮೈಸೂರು ಜಿಲ್ಲಾ ವರದಿಗಾರರಾಗಿಕರ್ತವ್ಯ ನಿರ್ವಹಿಸುತ್ತಿದ್ದಾರೆ.