ಶೃಂಗೇರಿ ಚುನಾವಣೆ ವಿಚಾರ | ಸುಪ್ರೀಕೋರ್ಟ್ ಆದೇಶ ಪಾಲಿಸುತ್ತೇವೆ : ಯು.ಟಿ.ಖಾದರ್
Update: 2026-05-12 21:30 IST
ಮೈಸೂರು , ಮೇ.12 : ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕರ ಆಯ್ಕೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಆದೇಶ ಪಾಲಿಸಲಾಗುವುದು ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಹೇಳಿದರು.
ನಗರದಲ್ಲಿ ಮಂಗಳವಾರ ಪತ್ರಕರ್ತರಿಗೆ ಪ್ರತಿಕ್ರಿಯೆ ನೀಡಿದ ಅವರು, ಶೃಂಗೇರಿ ಕ್ಷೇತ್ರದ ಮರು ಮತ ಎಣಿಕೆ ಫಲಿತಾಂಶಕ್ಕೆ ನ್ಯಾಯಾಲಯ ತಡೆ ನೀಡಿರುವ ಕಾರಣ ಶಾಸಕರಾಗಿ ರಾಜೇಗೌಡರೇ ಮುಂದುವರಿಯುತ್ತಾರೆ. ಮತ್ತೆ ಪ್ರಮಾಣವಚನ ಸ್ವೀಕಾರಕ್ಕೆ ಅವರು ಸಮಯ ಕೇಳಿದ್ದಾರೆ. ಸದ್ಯದಲ್ಲೇ ಅವಕಾಶ ನೀಡುತ್ತೇನೆ ಎಂದರು.