×
Ad

ವಯನಾಡ್: ಪ್ರಪಾತಕ್ಕೆ ಉರುಳಿದ ಜೀಪ್; 9 ಮಂದಿ ಮೃತ್ಯು

Update: 2023-08-25 18:15 IST

Photo credit: onmanorama.com

ವಯನಾಡ್: ಜೀಪ್ ಒಂದು ನಿಯಂತ್ರಣ ಕಳೆದುಕೊಂಡು ಪ್ರಪಾತಕ್ಕೆ ಉರುಳಿದ ಪರಿಣಾಮ ಒಂಬತ್ತು ಮಂದಿ ಮೃತಪಟ್ಟು, ಚಾಲಕ ಸೇರಿದಂತೆ ನಾಲ್ಕು ಮಂದಿ ಗಾಯಗೊಂಡಿರುವ ಘಟನೆ ಶುಕ್ರವಾರ ವಯನಾಡ್ ನ ಮನಂತವಾಡಿ ಬಳಿ ನಡೆದಿದೆ ಎಂದು onmanorama.com ವರದಿ ಮಾಡಿದೆ.

ಈ ಘಟನೆಯು ಕೂಲಿ ಕಾರ್ಮಿಕರನ್ನು ತೋಟದಿಂದ ಜೀಪ್ ನಲ್ಲಿ ಕರೆದುಕೊಂಡು ಬರುವಾಗ ತಲಪುಳ್ಳ ಬಳಿಯ ಕನ್ನೋತ್ ಬೆಟ್ಟದ ಬಳಿ ನಡೆದಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಘಟನೆಯಲ್ಲಿ ಮೃತಪಟ್ಟಿರುವ ಎಲ್ಲರೂ ವಯನಾಡ್ ಜಿಲ್ಲೆಗೆ ಸೇರಿದವರಾಗಿದ್ದಾರೆ.

ಘಟನೆಯಲ್ಲಿ ಗಾಯಗೊಂಡಿರುವವರ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಅಪಘಾತದ ಸಮಯದಲ್ಲಿ ಜೀಪ್ ಚಾಲಕನೂ ಸೇರಿದಂತೆ ಒಟ್ಟು 13 ಮಂದಿ ಪ್ರಯಾಣಿಸುತ್ತಿದ್ದರು ಎಂದು ವರದಿಯಾಗಿದೆ. ಈ ಪೈಕಿ ಬಹುತೇಕರು ಮಹಿಳೆಯರಾಗಿದ್ದರು ಎಂದು ಮೂಲವೊಂದು ತಿಳಿಸಿವೆ.

ವಯನಾಡ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News