ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ; ಗದ್ದಲದ ನಡುವೆ ಲೋಕಸಭೆ ಅಧಿವೇಶನ ಸೋಮವಾರದವರೆಗೆ ಮುಂದೂಡಿಕೆ

Update: 2026-07-24 12:40 IST
Photo | indiatoday

ಹೊಸದಿಲ್ಲಿ, ಜು. 24: ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ವಿರೋಧ ಪಕ್ಷದ ಸಂಸದರು ಘೋಷಣೆಗಳನ್ನು ಕೂಗಿದ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಶುಕ್ರವಾರ ಭಾರೀ ಗದ್ದಲ ಉಂಟಾಗಿ, ಕಲಾಪವನ್ನು ಸೋಮವಾರ ಬೆಳಿಗ್ಗಿನವರೆಗೆ  ಮುಂದೂಡಲಾಗಿದೆ.

ಮಧ್ಯಾಹ್ನ 12 ಗಂಟೆಗೆ ಲೋಕಸಭಾ ಕಲಾಪ ಮತ್ತೆ ಪ್ರಾರಂಭಗೊಂಡಾಗ, ನೀಟ್ ಪರೀಕ್ಷಾ ಅಕ್ರಮದ ಕುರಿತು ಧ್ವನಿ ಎತ್ತಿದ ವಿಪಕ್ಷಗಳ ಸಂಸದರು “ಶಿಕ್ಷಣ ಸಚಿವರೇ ರಾಜೀನಾಮೆ ನೀಡಿ” ಎಂದು ಘೋಷಣೆಗಳನ್ನು ಕೂಗಿದರು. ಇದರಿಂದ ಲೋಕಸಭಾ ಕಲಾಪವನ್ನು ಸೋಮವಾರದವರೆಗೆ ಮುಂದೂಡಲಾಗಿದೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News