×
Ad

ಪ್ರತಿಭಟನಾಕಾರರ ಮೊಬೈಲ್ ಫೋನ್ ಗಳು ಕಣ್ಗಾವಲಿನಲ್ಲಿವೆ: CJP ಸಂಸ್ಥಾಪಕ ಅಭಿಜೀತ್ ದೀಪ್ಕೆ ಆರೋಪ

Update: 2026-07-02 13:34 IST

ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ (Photo: PTI) 

ಹೊಸದಿಲ್ಲಿ: ದಿಲ್ಲಿಯ ಜಂತರ್ ಮಂತರ್ ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿರುವ ಪ್ರತಿಭಟನಾಕಾರರ ಮೊಬೈಲ್ ಫೋನ್ ಗಳು ಕಣ್ಗಾವಲಿನಲ್ಲಿವೆ ಎಂದು ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಆರೋಪಿಸಿದ್ದಾರೆ.

ಈ ಬಗ್ಗೆ ಎಕ್ಸ್‌ ನಲ್ಲಿ ಬರೆದಿರುವ ಅವರು, ತಮ್ಮ ಸಂಘಟನೆಯ ಆಂತರಿಕ ಸಂವಹನಗಳ ಮೇಲೆ ನಿಗಾ ವಹಿಸಲಾಗಿದೆ ಎಂದು ವ್ಯವಸ್ಥೆಯೊಳಗಿನ ಕೆಲವು ಅನಾಮಧೇಯ ಮೂಲಗಳು ಮಾಹಿತಿ ನೀಡಿವೆ ಎಂದು ತಿಳಿಸಿದ್ದಾರೆ.

ಪರೀಕ್ಷಾ ಅಕ್ರಮಗಳ ಆರೋಪಗಳಿಗೆ ಸಂಬಂಧಿಸಿದಂತೆ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜಿನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆ 13ನೇ ದಿನಕ್ಕೆ ಕಾಲಿಟ್ಟಿದ್ದು,ಇದೀಗ ಹೊಸ ಆರೋಪಗಳು ಕೇಳಿಬಂದಿವೆ.

ನಮ್ಮ ಫೋನ್ಗಳು ನಿಗಾದಲ್ಲಿವೆ ಹಾಗೂ ನಮ್ಮ ವಾಟ್ಸ್ಆಪ್ ಕರೆಗಳು ಮತ್ತು ಚಾಟ್ಗಳು ಕಣ್ಗಾವಲಿಗೊಳಪಟ್ಟಿವೆ ಎಂದು ನಮಗೆ ಮಾಹಿತಿ ನೀಡಿರುವ ಮೂಲಗಳು, ನಾವು ನಡೆಸಿದ ಮಾತುಕತೆಗಳ ಪ್ರತಿ ಪದಗಳನ್ನು ಹೇಳುವ ಮೂಲಕ ನಮ್ಮನ್ನು ಎಚ್ಚರಿಸಿವೆ ಎಂದು ಹೇಳಿದರು.

ಮತ್ತೊಂದು ಪೋಸ್ಟ್‌ ನಲ್ಲಿ ಭಾರೀ ಮಳೆಯ ನಡುವೆಯೂ ಪ್ರತಿಭಟನಾಕಾರರು ತಮ್ಮ ಹೋರಾಟವನ್ನು ಮುಂದುವರಿಸುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಶಿಕ್ಷಣ ಸುಧಾರಣಾ ಹೋರಾಟಗಾರ ಸೋನಂ ವಾಂಗ್ಚುಕ್ ಅವರ ಫೋಟೋವನ್ನೂ ಹಂಚಿಕೊಂಡಿದ್ದು, ಅವರ ಅನಿರ್ದಿಷ್ಟಾವಧಿಯ ಉಪವಾಸ ಸತ್ಯಾಗ್ರಹವು ಗುರುವಾರ ಐದನೇ ದಿನಕ್ಕೆ ಕಾಲಿಟ್ಟಿದೆ ಎಂದು ತಿಳಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News