FIFA World Cup Final | ಜು.20ರಂದು ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ಘೋಷಿಸಿದ ಕೇರಳಂ ಸರಕಾರ

Update: 2026-07-19 13:05 IST

ಸಾಂದರ್ಭಿಕ ಚಿತ್ರ

ಕಾಸರಗೋಡು, ಜು.19: ಫಿಫಾ ವಿಶ್ವಕಪ್ ಫೈನಲ್ ಪಂದ್ಯದ ಹಿನ್ನೆಲೆಯಲ್ಲಿ ಕೇರಳಂ ರಾಜ್ಯದ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಿಗೆ ಜುಲೈ 20ರಂದು ಸೋಮವಾರ ಕೇರಳಂ ಸರಕಾರ ರಜೆ ಘೋಷಿಸಿದೆ.

ವೃತ್ತಿಪರ ಕಾಲೇಜುಗಳು ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ನಾಳೆ ರಜೆ ನೀಡಲು ಮುಖ್ಯಮಂತ್ರಿ ವಿ.ಡಿ. ಸತೀಶನ್ ನಿರ್ದೇಶನ ನೀಡಿದ್ದಾರೆ ಎಂದು ತಿಳಿದು ಬಂದಿದೆ. 

ಫಿಫಾ ವಿಶ್ವಕಪ್ ಫುಟ್ಬಾಲ್ ಫೈನಲ್ ಪಂದ್ಯವು ರವಿವಾರ ತಡರಾತ್ರಿ (ಸೋಮವಾರ ಮುಂಜಾನೆ 12:30ಕ್ಕೆ) ಅರ್ಜೆಂಟೀನಾ ಮತ್ತು ಸ್ಪೇನ್ ನಡುವೆ ನಡೆಯಲಿದೆ. ಪಂದ್ಯವು ಮುಂಜಾನೆವರೆಗೆ ನಡೆಯುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಪಂದ್ಯವನ್ನು ವೀಕ್ಷಿಸಿ ಆನಂದಿಸಲು ಅನುಕೂಲ ಕಲ್ಪಿಸುವ ಉದ್ದೇಶದಿಂದ ಕೇರಳಂ ಸರಕಾರವು ರಾಜ್ಯದ ಎಲ್ಲಾ ಶಾಲೆಗಳು, ಕಾಲೇಜುಗಳು ಮತ್ತು ವೃತ್ತಿಪರ ಶಿಕ್ಷಣ ಸಂಸ್ಥೆಗಳಿಗೆ ಸೋಮವಾರ ಅಧಿಕೃತ ರಜೆ ಪ್ರಕಟಿಸಿದೆ.

ಮುಂಚಿತವಾಗಿ ನಿಗದಿಯಾಗಿರುವ ಎಲ್ಲಾ ಅಧಿಕೃತ ಪರೀಕ್ಷೆಗಳು ಯಾವುದೇ ಬದಲಾವಣೆಯಿಲ್ಲದೆ ಎಂದಿನಂತೆ ನಡೆಯಲಿವೆ ಎಂದು ಸರಕಾರ ಘೋಷಿಸಿದೆ.

ಆದಾಗ್ಯೂ, ಈಗಾಗಲೇ ಮುಂಚಿತವಾಗಿ ನಿಗದಿಪಡಿಸಲಾದ ಪರೀಕ್ಷೆಗಳನ್ನು ಯೋಜಿಸಿದಂತೆ ನಡೆಸಲಾಗುವುದು. ಸದ್ಯದಲ್ಲೇ ಅಧಿಕೃತ ಸರಕಾರದ ಆದೇಶ ಹೊರಬೀಳುವ ನಿರೀಕ್ಷೆ ಇದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News