ಸಾಂದರ್ಭಿಕ ಚಿತ್ರ (AI Generated) 

ಚಿನ್ನ ಮತ್ತು ಬೆಳ್ಳಿಯ ಬೆಲೆ ಕುಸಿತ ಮುಂದುವರಿದಿದ್ದು, ಬೆಳ್ಳಿ ಬೆಲೆ ಕಳೆದ ಒಂದು ವರ್ಷಕ್ಕೆ ಕನಿಷ್ಠ ಮಟ್ಟಕ್ಕೆ ಕುಸಿದಿದೆ.

ದೇಶಿ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆಯು ಜನವರಿಯಲ್ಲಿ ದಾಖಲಿಸಿದ್ದ ಗರಿಷ್ಠ ಮಟ್ಟಕ್ಕಿಂತ ಸಾಕಷ್ಟು ಕೆಳಗಿಳಿದಿದೆ. ನವೆಂಬರ್ 9ರಿಂದ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸುಮಾರು ಶೇ 6ರಷ್ಟು ಕಡಿಮೆಯಾಗಿದ್ದರೆ, ನವೆಂಬರ್ 5ರಿಂದ ಕಳೆದ ಎಂಟು ವಹಿವಾಟು ಅವಧಿಗಳಲ್ಲಿ ಬೆಳ್ಳಿಯ ಬೆಲೆ ಶೇ 13ರಷ್ಟು ಕುಸಿದಿರುವುದು ವರದಿಯಾಗಿದೆ.

ಚಿನ್ನ ಮತ್ತು ಬೆಳ್ಳಿಯ ಬೆಲೆ ಕುಸಿತ ಮುಂದುವರಿದಿದ್ದು, ಬೆಳ್ಳಿ ಬೆಲೆ ಕಳೆದ ಒಂದು ವರ್ಷಕ್ಕೆ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಕರೆನ್ಸಿ ಮೌಲ್ಯದ ಏರಿಳಿತಗಳು, ಅಮೆರಿಕದ ಟ್ರೆಷರಿ ಬಾಂಡ್‌ಗಳ ಮೇಲಿನ ಆದಾಯ ಹೆಚ್ಚಳ ಮತ್ತು ಬಡ್ಡಿದರಗಳ ಬದಲಾಗುತ್ತಿರುವ ನಿರೀಕ್ಷೆಗಳು ದೇಶೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ನಿರಂತರ ಒತ್ತಡಕ್ಕೆ ಒಳಗಾಗಲು ಕಾರಣಗಳಾಗಿವೆ.

ಅಲ್ಲದೆ, ಚಿನ್ನ ಆಧಾರಿತ ಇಟಿಎಫ್‌ಗಳಿಂದಲೂ ಹೂಡಿಕೆದಾರರು ವಾರದಿಂದ ವಾರಕ್ಕೆ ಹಣ ಹಿಂಪಡೆಯುತ್ತಿದ್ದಾರೆ. ಡಿಸೆಂಬರ್‌ನಲ್ಲಿ ಅಮೆರಿಕದ ಕೇಂದ್ರೀಯ ಬ್ಯಾಂಕ್ ಬಡ್ಡಿದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸುವ ಸಾಧ್ಯತೆ ಶೇ 95.7ರಷ್ಟಿದೆ ಎಂದು ಮಾರುಕಟ್ಟೆ ಅಂದಾಜಿಸಿರುವುದರಿಂದ ಹಣಕಾಸು ನೀತಿಯ ನಿರೀಕ್ಷೆಗಳೇ ಮುಂದಿನ ಬೆಲೆ ನಿರ್ಧಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ.

ವರ್ಷದ ಕನಿಷ್ಠ ದರ ದಾಖಲಿಸಿದ ಚಿನ್ನ

ಅಮೆರಿಕದ ಫೆಡರಲ್ ರಿಸರ್ವ್ ಸಭೆಯ ವಿವರಗಳು, ಪ್ರಮುಖ ಆರ್ಥಿಕತೆಗಳ ಹಣದುಬ್ಬರದ ದತ್ತಾಂಶ ಮತ್ತು ಚೀನಾದ ಕೈಗಾರಿಕಾ ಉತ್ಪಾದನಾ ಅಂಕಿ-ಅಂಶಗಳ ಮೇಲೆ ಚಿನ್ನ-ಬೆಳ್ಳಿಯ ಬೆಲೆ ಅವಲಂಬಿಸಿದೆ. ಅಂತಾರಾಷ್ಟ್ರೀಯ ಚಿನ್ನದ ಬೆಲೆಗಳು ಒಂದು ನಿರ್ದಿಷ್ಟ ಮಿತಿಯೊಳಗೆ ಸ್ಥಿರಗೊಳ್ಳುವ ನಿರೀಕ್ಷೆಯಿದ್ದರೆ, ದೇಶೀಯ ಮದುವೆ ಸೀಸನ್ ಬೇಡಿಕೆ ಮತ್ತು ಕೇಂದ್ರೀಯ ಬ್ಯಾಂಕ್‌ಗಳ ಖರೀದಿಯು ಚಿನ್ನದ ಬೆಲೆಗೆ ಬೆಂಬಲವಾಗುವ ನಿರೀಕ್ಷೆಯಿದೆ. ಆದರೆ ಬೆಳ್ಳಿ ಭಿನ್ನ ಸವಾಲುಗಳನ್ನು ಎದುರಿಸುತ್ತಿದೆ. ಸೋಲಾರ್ ಸೆಲ್‌ಗಳಲ್ಲಿ ಬೆಳ್ಳಿಗೆ ಪರ್ಯಾಯ ವಸ್ತುಗಳನ್ನು ಬಳಸುತ್ತಿರುವುದು ಮತ್ತು ಆಭರಣ ಬೇಡಿಕೆ ಕುಸಿದಿರುವುದು ಬಳಕೆಯ ಮೇಲೆ ಒತ್ತಡ ಬೀಳುವ ನಿರೀಕ್ಷೆಯಿದೆ.

ಚಿನ್ನದ ಬೆಲೆಯಲ್ಲಿ ಮತ್ತೆ ತೀವ್ರ ಕುಸಿತ

ನವೆಂಬರ್ 18ರಂದು ಬುಧವಾರ 11 ಗಂಟೆಯ ವಹಿವಾಟಿನಲ್ಲಿ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಮಂಗಳವಾರ ಸಂಜೆಯ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂಗೆ 278 ರೂ. ಇಳಿಕೆಯಾಗಿದ್ದು, ಹತ್ತು ಗ್ರಾಂ ಬೆಲೆ 1,33,260 ರೂ. ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಪ್ರತಿ ಗ್ರಾಂಗೆ 255 ರೂ. ಕುಸಿದಿದ್ದು, ಹತ್ತು ಗ್ರಾಂಗೆ 1,22,150 ರೂ. ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 209 ರೂ. ಕಡಿಮೆಯಾಗಿ, ಹತ್ತು ಗ್ರಾಂಗೆ 99,940 ರೂ. ಗೆ ತಲುಪಿದೆ.

ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ?

ನವೆಂಬರ್ 18ರಂದು ಬುಧವಾರ ಬೆಳಗಿನ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಮತ್ತೆ ತೀವ್ರ ಇಳಿಕೆ ದಾಖಲಿಸಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 13,326 (-278) ರೂ. ರಷ್ಟಕ್ಕೆ ತಲುಪಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 12,215 (-255) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ 9,994 (-209) ರೂ. ಬೆಲೆಗೆ ಬಂದು ನಿಂತಿದೆ.

ಬೆಳ್ಳಿಯ ದರದಲ್ಲೂ ಭಾರಿ ಕುಸಿತ

ಜನವರಿಯಲ್ಲಿ ಗರಿಷ್ಠ ಮಟ್ಟಕ್ಕೆ ಹೋಗಿದ್ದ ಬೆಳ್ಳಿಯ ಬೆಲೆ ನಂತರ ಕುಸಿತದ ಹಾದಿಯಲ್ಲಿತ್ತು. ಮಂಗಳೂರಿನಲ್ಲಿ ಜುಲೈ 11ರಿಂದ ಬೆಳ್ಳಿಯ ದರ ಬಹುತೇಕ ಪ್ರತಿ ಕೆಜಿಗೆ 2,35,000ರೂ.ಗೆ ಸ್ಥಿರವಾಗಿತ್ತು. ಆದರೆ ಆಗಸ್ಟ್ ಆರಂಭದ ವಾರಗಳಲ್ಲಿ ಮತ್ತೆ ಏರಿಕೆಯಾಗಿ ಪ್ರತಿ ಕೆಜಿಗೆ 2,60,000ರೂ. ವರೆಗೆ ಏರಿತ್ತು. ಆಗಸ್ಟ್ ಕೊನೆ ವಾರದಲ್ಲಿ ಮತ್ತು ಸೆಪ್ಟೆಂಬರ್ ಆರಂಭದಲ್ಲಿ ಬೆಳ್ಳಿಯ ದರ ಕುಸಿದು ಪ್ರತಿ ಕೆಜಿಗೆ 2,45,000ರೂ.ಗೆ ಬಂದು ನಿಂತಿತ್ತು.

ಸೆಪ್ಟೆಂಬರ್‌ ನಂತರದ ವಾರಗಳಲ್ಲಿ ಸ್ವಲ್ಪ ಏರಿಳಿತ ಕಂಡರೂ ಮತ್ತೆ ದರ ಕುಸಿದು ಪ್ರತಿ ಕೆಜಿಗೆ 2,45,000ರೂ.ಗೆ ಬಂದು ಸ್ಥಿರವಾಗಿತ್ತು. ನಂತರ ಅಕ್ಟೋಬರ್ ತಿಂಗಳಲ್ಲಿ ಕುಸಿದ ಬೆಳ್ಳಿಯ ದರ ಅಕ್ಟೋಬರ್ 15ರಂದು ಪ್ರತಿ ಗ್ರಾಂಗೆ 5ರೂ ಇಳಿದು ಮತ್ತೆ ಪ್ರತಿ ಕೆಜಿಗೆ 2,30,000ರೂ.ಗೆ ತಲುಪಿ ಸ್ಥಿರವಾಗಿತ್ತು.

ಅಕ್ಟೋಬರ್ ತಿಂಗಳ ಅಂತ್ಯದಲ್ಲಿ ಬೆಳ್ಳಿಯ ದರ ಪ್ರತಿ ಕೆಜಿಗೆ 2,00,000ರೂ.ಗೆ ತಲುಪಿತ್ತು. ಅಂದಿನಿಂದ ಅದೇ ಬೆಲೆಗೆ ಸ್ಥಿರವಾಗಿತ್ತು. ನಂತರ ನವೆಂಬರ್ ಆರಂಭದಲ್ಲಿ ಸ್ವಲ್ಪ ಏರಿಳಿತ ಕಂಡರೂ ನವೆಂಬರ್ 14ರಂದು ಮತ್ತೆ ಕುಸಿದಿರುವ ಬೆಳ್ಳಿಯ ದರ ಪ್ರತಿ ಕೆಜಿಗೆ 1,95,000ಕ್ಕೆ ಇಳಿದಿದೆ. ನವೆಂಬರ್ 16ರಂದು ಮತ್ತೆ ಪ್ರತಿ ಗ್ರಾಂಗೆ 5ರೂ ಇಳಿದಿರುವ ಬೆಳ್ಳಿಯ ದರ ಮತ್ತೆ ಪ್ರತಿ ಕೆಜಿಗೆ 1,90,000ಕ್ಕೆ ಕುಸಿದಿದೆ. ಬುಧವಾರ ನವೆಂಬರ್ 18ರಂದು ಮತ್ತೆ ಪ್ರತಿ ಗ್ರಾಂಗೆ 5 ರೂ ಇಳಿದಿರುವ ಬೆಳ್ಳಿಯ ದರ ಮತ್ತೆ ಪ್ರತಿ ಕೆಜಿಗೆ 1,85,000ಕ್ಕೆ ತಲುಪಿದೆ.

ವಿವಿಧ ನಗರಗಳಲ್ಲಿ 1 ಗ್ರಾಂ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ?

ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 13,341 (-279) ರೂ., 22 ಕ್ಯಾರೆಟ್ ಚಿನ್ನದ ದರ 12,230 (-255) ರೂ.

ಮುಂಬೈ: 24 ಕ್ಯಾರೆಟ್ ಚಿನ್ನದ ದರ 13,326 (-278) ರೂ., 22 ಕ್ಯಾರೆಟ್ ಚಿನ್ನದ ದರ 12,215 (-255) ರೂ.

ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 13,331 (-279) ರೂ., 22 ಕ್ಯಾರೆಟ್ ಚಿನ್ನದ ದರ 12,220 (-255) ರೂ.

ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 13,326 (-278) ರೂ., 22 ಕ್ಯಾರೆಟ್ ಚಿನ್ನದ ದರ 12,215 (-255) ರೂ.

ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 13,326 (-278) ರೂ., 22 ಕ್ಯಾರೆಟ್ ಚಿನ್ನದ ದರ 12,215 (-255) ರೂ.

ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 13,326 (-278) ರೂ., 22 ಕ್ಯಾರೆಟ್ ಚಿನ್ನದ ದರ 12,215 (-255) ರೂ.

ಜೈಪುರ: 24 ಕ್ಯಾರೆಟ್ ಚಿನ್ನದ ದರ 13,341 (-279) ರೂ., 22 ಕ್ಯಾರೆಟ್ ಚಿನ್ನದ ದರ 12,230 (-255) ರೂ.

ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 13,341 (-279) ರೂ., 22 ಕ್ಯಾರೆಟ್ ಚಿನ್ನದ ದರ 12,230 (-255) ರೂ.

ಲಕ್ನೋ: 24 ಕ್ಯಾರೆಟ್ ಚಿನ್ನದ ದರ 13,341 (-279) ರೂ., 22 ಕ್ಯಾರೆಟ್ ಚಿನ್ನದ ದರ 12,230 (-255) ರೂ.

ಕೊಚ್ಚಿ: 24 ಕ್ಯಾರೆಟ್ ಚಿನ್ನದ ದರ 13,326 (-278) ರೂ., 22 ಕ್ಯಾರೆಟ್ ಚಿನ್ನದ ದರ 12,215 (-255) ರೂ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Contributor - ಎನ್ ಕೆ ಸುಪ್ರಭಾ

contributor

ಎನ್ ಕೆ ಸುಪ್ರಭಾ, ಹಿರಿಯ ಪತ್ರಕರ್ತೆ ಮತ್ತು ಅನುವಾದಕಿ. ಸಮಕಾಲೀನ ವಿದ್ಯಮಾನಗಳು, ರಾಷ್ಟ್ರೀಯ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುವ ಉತ್ಸಾಹಿ. ಸುದೀರ್ಘ ಎರಡೂವರೆ ದಶಕಗಳ ಕಾಲ ಮುದ್ರಣ ಹಾಗೂ ಡಿಜಿಟಲ್‌ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸಿದ ಅನುಭವಿ. ತರಂಗ ಮತ್ತು ದಿ ಸಂಡೇ ಇಂಡಿಯನ್‌ ಸಾಪ್ತಾಹಿಕ, ಉಷಾಕಿರಣ, ಟೈಮ್ಸ್‌ ಆಫ್‌ ಇಂಡಿಯಾ ಕನ್ನಡ, ಕನ್ನಡಪ್ರಭ, ವಾರ್ತಾಭಾರತಿ ದಿನಪತ್ರಿಕೆಗಳು ಹಾಗೂ ದಿ ಸ್ಟೇಟ್‌, ಈ ದಿನ ಡಿಜಿಟಿಲ್ ಮಾಧ್ಯಮ ಸಂಸ್ಥೆಗಳಲ್ಲಿ ಸಂಪಾದಕೀಯ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಸಿನಿಮಾ, ತಂತ್ರಜ್ಞಾನ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೆ ಸಂಬಂಧಿಸಿದ ಹಲವಾರು ವರದಿ, ವಿಶ್ಲೇಷಣೆಗಳನ್ನು ಪ್ರಕಟಿಸಿದ್ದಾರೆ.