×
Ad

ನಾರಾಯಣಮೂರ್ತಿಯವರ ನಾಲ್ಕು ತಿಂಗಳ ಮೊಮ್ಮಗ ಈಗ ಕೋಟ್ಯಧಿಪತಿ!

Update: 2024-03-18 23:27 IST

ನಾರಾಯಣಮೂರ್ತಿ | Photo: PTI

ಹೊಸದಿಲ್ಲಿ: ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಅವರು ತಮ್ಮ ನಾಲ್ಕು ತಿಂಗಳ ಮೊಮ್ಮಗ ಏಕಾಗ್ರ ರೋಹನ್ ಮೂರ್ತಿಗೆ 240 ಕೋಟಿ ಮೌಲ್ಯದ ಇನ್ಫೋಸಿಸ್ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ndtv ವರದಿ ಮಾಡಿದೆ.

ಷೇರು ಮಾರುಕಟ್ಟೆಯ ಮಾಹಿತಿಯಂತೆ, ನಾರಾಯಣಮೂರ್ತಿಯವರು ಇನ್ಫೋಸಿಸ್ ನ 15 ಲಕ್ಷ ಷೇರುಗಳನ್ನು ಮೊಮ್ಮಗನಿಗೆ ನೀಡಿದ್ದಾರೆ. ಈ ವರ್ಗಾವಣೆಯು ಷೇರು ಮಾರುಕಟ್ಟೆಯ ಅವಧಿಯ ಹೊರಗೆ ನಡೆದಿದ್ದು, ಫೈಲಿಂಗ್ ಸಂದರ್ಭದಲ್ಲಿ ಬಹಿರಂಗಗೊಂಡಿದೆ ಎಂದು ತಿಳಿದು ಬಂದಿದೆ. ಆ ಮೂಲಕ ಕೋಟ್ಯಧಿಪತಿಗಳ ಸಾಲಿಗೆ ನಾಲ್ಕು ತಿಂಗಳ ಮಗು ಸೇರಿದೆ.

ನಾರಾಯಣಮೂರ್ತಿ ಅವರ ಪುತ್ರ ರೋಹನ್ ಮೂರ್ತಿ ಹಾಗೂ ಅಪರ್ಣಾ ಕೃಷ್ಣನ್ ದಂಪತಿಗೆ 2023ರ ನವೆಂಬರ್ನಲ್ಲಿ, ಏಕಾಗ್ರ ಜನಿಸಿದ್ದರು. ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ಅವರಿಗೆ ಏಕಾಗ್ರ ಮೂರನೇ ಮೊಮ್ಮಗು. ಅಕ್ಷತಾ ಮೂರ್ತಿ - ರಿಷಿ ಸುನಕ್ ಅವರಿಗೆ ಇಬ್ಬರು ಪುತ್ರಿಯರಿದ್ದಾರೆ.

ವಾರ್ತಾಭಾರತಿ ಓದುಗರಿಗೆ ಶುಭಸುದ್ದಿ: ನಿಮ್ಮ ನೆಚ್ಚಿನ VB ಈಗ ವಾಟ್ಸ್ ಆ್ಯಪ್ ಚಾನೆಲ್ ನಲ್ಲೂ ಲಭ್ಯ

https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News