ಕೇರಳ | ಬಿಜೆಪಿ ಕೌನ್ಸಿಲರ್ ಮೃತದೇಹ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆ
Update: 2025-09-20 20:28 IST
ಸಾಂದರ್ಭಿಕ ಚಿತ್ರ
ತಿರುವನಂತಪುರಂ: ತಿರುವನಂತಪುರಂ ಕಾರ್ಪೊರೇಷನ್‌ನ ತಿರುಮಲ ವಾರ್ಡ್‌ನ ಬಿಜೆಪಿ ಕೌನ್ಸಿಲರ್ ಕೆ. ಅನಿಲ್ ಕುಮಾರ್ ಶನಿವಾರ ತಮ್ಮ ಕಚೇರಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ತಿರುಮಲ ವಾರ್ಡ್‌ನ ಕೌನ್ಸಿಲರ್ ಕೆ. ಅನಿಲ್ ಕುಮಾರ್ ಅವರ ಮೃತದೇಹ ಅವರ ಕಚೇರಿ ಕೊಠಡಿಯಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಬೆಳಗ್ಗೆ 9.30ಕ್ಕೆ ಪತ್ತೆಯಾಗಿದೆ. ಇದು ಆತ್ಮಹತ್ಯೆ ಪ್ರಕರಣ ಎಂದು ಶಂಕಿಸಲಾಗಿದೆ. ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನ ನೇತೃತ್ವದ ಕೋ-ಆಪರೇಟಿವ್ ಸೊಸೈಟಿಯ ಹಣಕಾಸು ಸಮಸ್ಯೆಗಳಿಂದ ಅವರು ಸ್ಪಲ್ಪ ಸಮಯದಿಂದ ಬೇಸರಗೊಂಡಿದ್ದರು ಎಂದು ದೂರದರ್ಶನ ವಾಹಿನಿಗಳು ವರದಿ ಮಾಡಿವೆ. ಮೃತದೇಹದ ಸಮೀಪ ಡೆತ್ ನೋಟ್ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.