×
Ad

ಮಹಾರಾಷ್ಟ್ರ| "ನಾನು ಜೀವನವನ್ನು ಆನಂದಿಸಿದ್ದೇನೆ" : ಡೆತ್‌ ನೋಟ್‌ ಬರೆದು ಡಿಸಿಪಿಯ ಅಪ್ರಾಪ್ತ ಪುತ್ರ ಆತ್ಮಹತ್ಯೆ

Update: 2024-10-14 17:40 IST

ಛತ್ರಪತಿ ಸಂಭಾಜಿನಗರ: ನಾನು ನನ್ನ ಜೀವನವನ್ನು ಆನಂದಿಸಿದ್ದೇನೆ ಎಂದು ಮರಣ ಪತ್ರ ಬರೆದಿಟ್ಟಿರುವ ಪೊಲೀಸ್ ಉಪ ಆಯುಕ್ತ (ಮುಖ್ಯ ಕಚೇರಿ) ಶೀಲವಂತ್ ನಾಂದೇಡ್ಕರ್ ಅವರ 17 ವರ್ಷದ ಅಪ್ರಾಪ್ತ ಪುತ್ರ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರವಿವಾರ ನಡೆದಿದೆ.

ಮೃತ ಬಾಲಕನನ್ನು ಸಾಹಿಲ್ ಎಂದು ಗುರುತಿಸಲಾಗಿದ್ದು, ಆತ ಎಚ್ಎಸ್ಸಿ ವ್ಯಾಸಂಗ ಮಾಡುತ್ತಿದ್ದನು. ಇದರೊಂದಿಗೆ ಐಐಟಿ ಪ್ರವೇಶ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದನು ಎಂದು ಹೇಳಲಾಗಿದೆ.

ತನ್ನ ಬ್ಯಾಚ್ ನಲ್ಲಿ ಸಾಹಿಲ್ ಮೆರಿಟ್ ವಿದ್ಯಾರ್ಥಿಯಾಗಿದ್ದ ಎನ್ನಲಾಗಿದೆ.

ತನ್ನ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರೊಂದಿಗೆ ದಸರಾ ಸಂಭ್ರಮಾಚರಣೆ ನಡೆಸಿರುವ ಸಾಹಿಲ್, ತನ್ನ ಪೋಷಕರು ಹಾಗೂ ಸ್ನೇಹಿತರೊಂದಿಗೆ ಕೆಲ ವಿಷಯಗಳ ಕುರಿತು ಹಾಸ್ಯವನ್ನೂ ಮಾಡಿದ್ದಾನೆ. ಮಧ್ಯರಾತ್ರಿಯ ನಂತರ, ಮಲಗಲು ಕೋಣೆಗೆ ತೆರಳಿರುವ ಸಾಹಿಲ್, ಮರುದಿನ ಬೆಳಗ್ಗೆ ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಮರಣೋತ್ತರ ಪರೀಕ್ಷೆಯ ನಂತರ, ಸಾಹಿಲ್ ಮೃತದೇಹವನ್ನು ಆತನ ಪೋಷಕರಿಗೆ ಹಸ್ತಾಂತರಿಸಲಾಗಿದ್ದು, ಪ್ರತಾಪ್ ನಗರ್ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ.

ಈ ಸಂಬಂಧ ಆಕಸ್ಮಿಕ ಸಾವು ಪ್ರಕರಣ ದಾಖಲಿಸಿಕೊಂಡಿರುವ ವೇದಾಂತ್ ನಗರ್ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News