×
Ad

ಮುಂಬೈ: ವೈದ್ಯೆ ಮೇಲೆ ಅತ್ಯಾಚಾರ ಎಸಗಿ ದರೋಡೆ; ಆರೋಪಿಯ ಬಂಧನ

Update: 2023-11-16 08:28 IST

Photo: freepik

ಮುಂಬೈ: ವೈದ್ಯೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ ಬ್ಲ್ಯಾಕ್ಮೇಲ್ ಮಾಡಿದ ಆರೊಪದಲ್ಲಿ 38 ವರ್ಷದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಮುಂಬೈನ ಗಾಮದೇವಿ ಪೊಲೀಸ್ ಠಾಣೆಯಲ್ಲಿ ವೈದ್ಯೆ ಕಳೆದ ವಾರ ನೀಡಿದ ದೂರಿನ ಆಧಾರದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ಹೇಳಿದೆ.

ಆರೋಪಿ, ತಾರದೇವ ಪ್ರದೇಶದಲ್ಲಿ ಬ್ಯಾಡ್ಮಿಂಟನ್ ಸೆಷನ್ ವೇಳೆ ಪರಿಚಯವಾಗಿ ವೈದ್ಯೆಯ ಸ್ನೇಹ ಸಂಪಾದಿಸಿದ್ದ ಎಂದು ಹೇಳಲಾಗಿದೆ. ಈ ಅವಧಿಯಲ್ಲಿ ಮಹಿಳೆ, ವೈಮನಸ್ಯದಿಂದಾಗಿ ಪತಿಯ ಜತೆ ವಾಸಿಸುತ್ತಿರಲಿಲ್ಲ ಎನ್ನಲಾಗಿದೆ. ಆಗ ಆರೋಪಿ, ವೈದ್ಯೆಯ ವೈಯಕ್ತಿಕ ಬದುಕಿನ ಬಗ್ಗೆ ಗಾಸಿಪ್ ಗಳನ್ನು ಹರಡಿರುವ ಬಗ್ಗೆ ಮಹಿಳೆ ಪ್ರಶ್ನಿಸಿದ್ದರು ಎನ್ನಲಾಗಿದೆ. ಈ ಬಗ್ಗೆ ಮಾತುಕತೆ ನಡೆಸಲು ಆಗಸ್ಟ್ 20ರಂದು ವೈದ್ಯೆಯನ್ನು ಆಹ್ವಾನಿಸಿದ್ದ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಮೆರೈನ್ ಡ್ರೈವ್ ಪ್ರದೇಶದ ಕ್ಲಬ್ ನಲ್ಲಿ ವೈದ್ಯೆಗೆ ಮದ್ಯಪಾನ ಮಾಡಿಸಿದ್ದ ಎಂದು ದೂರಿನಲ್ಲಿ ವಿವರಿಸಲಾಗಿದೆ. ಮಹಿಳೆಯನ್ನು ಕಾರಿನಲ್ಲಿ ಮನೆಗೆ ಕರೆದೊಯ್ದು ಬಳಿಕ ಮತ್ತಷ್ಟು ವೈನ್ ಕುಡಿಸಿದ. ಮದ್ಯದ ಅಮಲಿನಲ್ಲಿದ್ದಾಗ ಅತ್ಯಾಚಾರ ಎಸಗಿದ್ದಾಗಿ ದೂರಿನಲ್ಲಿ ಹೇಳಲಾಗಿದೆ. ಅಕ್ಟೋಬರ್ ನಲ್ಲಿ ಆಕೆಯಿಂದ ಹಣ ಕೇಳಿದ್ದು, ಆಕೆ ನಿರಾಕರಿಸಿದಾಗ, ಅತ್ಯಾಚಾರದ ವಿಡಿಯೊ, ಚಿತ್ರಗಳು ಮತ್ತು ಸಂಭಾಷಣೆ ವಿವರಗಳನ್ನು ಪತಿ ಹಾಗೂ ಸ್ನೇಹಿತರಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿ 3.33 ಲಕ್ಷ ರೂಪಾಯಿ ಕಿತ್ತುಕೊಂಡಿದ್ದ ಎಂದು ಆರೋಪಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News