×
Ad

ಬಿಹಾರ | ಥಳಿಸಿ, ಮೂತ್ರ ಕುಡಿಸಿದ ದುಷ್ಕರ್ಮಿಗಳು : ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಮೃತ್ಯು

Update: 2026-03-08 21:33 IST

ಸಾಂದರ್ಭಿಕ ಚಿತ್ರ

ಪಾಟ್ನಾ, ಮಾ. 8: ಬಿಹಾರದ ಮಧುಬನಿ ಜಿಲ್ಲೆಯಲ್ಲಿ ಗ್ರಾಮ ಮುಖ್ಯಸ್ಥೆಯ ಪುತ್ರನ ನೇತೃತ್ವದ ಗುಂಪಿನಿಂದ ಬರ್ಬರವಾಗಿ ಹಲ್ಲೆಗೊಳಗಾದ ಮಹಿಳೆಯೊಬ್ಬರು ಅನಂತರ ಮೃತಪಟ್ಟಿದ್ದಾರೆ ಎಂದು ‘ಮಖ್ತೂಬ್ ಮೀಡಿಯಾ’ ಶನಿವಾರ ವರದಿ ಮಾಡಿದೆ.

ಮೃತಪಟ್ಟ ಮಹಿಳೆಯನ್ನು ರೋಶನ್ ಖಾತೂನ್ ಎಂದು ಗುರುತಿಸಲಾಗಿದೆ. ಇವರು ಮಧುಬನಿಯ ಘೋಘಡದಿಹದ ಅಮ್ಹಿ ಗ್ರಾಮದ ನಿವಾಸಿ ಎಂದು ಅದು ವರದಿ ಮಾಡಿದೆ.

ಪೊಲೀಸ್ ಅಧಿಕಾರಿಗಳು ಹಾಗೂ ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿದ ವರದಿ ಪ್ರಕಾರ, ಖಾತೂನ್ ಅವರು ಸ್ಥಳೀಯ ವಿವಾದವೊಂದನ್ನು ಪರಿಹರಿಸಲು ಗ್ರಾಮದ ಮುಖ್ಯಸ್ಥೆ ಕುಮಾರಿ ದೇವಿ ಅವರನ್ನು ಭೇಟಿಯಾಗಲು ಫೆಬ್ರವರಿ 28ರಂದು ತೆರಳಿದ್ದರು. ಈ ಸಂದರ್ಭ ಕುಮಾರಿ ದೇವಿ ಅವರ ಪುತ್ರ ಮನು ಸಿಂಗ್ ಗುಂಪಿನೊಂದಿಗೆ ಸೇರಿ ಖಾತೂನ್ ಅವರಿಗೆ ಹಲ್ಲೆ ನಡೆಸಿದ್ದಾನೆ. ಇದರಿಂದ ಗಂಭೀರ ಗಾಯಗೊಂಡ ಖಾತೂನ್ ಅವರು ಪಾಟ್ನಾ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಮಾರ್ಚ್ 1ರಂದು ಮೃತಪಟ್ಟಿದ್ದಾರೆ.

ಸ್ಥಳೀಯ ಡಿಜಿಟಲ್ ಸುದ್ದಿ ಪತ್ರಿಕೆ ‘ಮಿಥ್ಲಾ ಸಮಾಚಾರ್’ ವರದಿ ಪ್ರಕಾರ ಮಹಿಳೆ ರಂಝಾನ್ ಪವಿತ್ರ ತಿಂಗಳಿನ ಉಪವಾಸದಲ್ಲಿದ್ದಾಗ ಅವರಿಗೆ ಥಳಿಸಲಾಗಿದೆ. ಅವರು ನೀರು ಕೇಳಿದಾಗ ಗುಂಪು ಮೂತ್ರ ಬೆರೆಸಿದ ಮಧ್ಯವನ್ನು ಕುಡಿಯುವಂತೆ ಬಲವಂತಪಡಿಸಿದೆ.

‘ಮಖ್ತೂಬ್ ಮೀಡಿಯಾ’ ಉಲ್ಲೇಖಿಸಿದ ಪ್ರತ್ಯಕ್ಷದರ್ಶಿಗಳ ಪ್ರಕಾರ, ದಾಳಿಕೋರರು ಖಾತೂನ್ ಅವರನ್ನು ಕಂಬಕ್ಕೆ ಕಟ್ಟಿದ್ದಾರೆ ಹಾಗೂ ತೀವ್ರವಾಗಿ ಥಳಿಸಿದ್ದಾರೆ. ಹಲ್ಲೆಯ ಸಂದರ್ಭ ಗುಂಪಿನಲ್ಲಿದ್ದವರು ಅವರನ್ನು ನಿಂದಿಸಿದ್ದಾರೆ.

ಈ ಘಟನೆ ಹಿನ್ನೆಲೆಯಲ್ಲಿ ಖಾತೂನ್ ಅವರ ಪತಿ ಆರೋಪಿಗಳಿಗೆ ಮರಣ ದಂಡನೆ ವಿಧಿಸುವಂತೆ ಆಗ್ರಹಿಸಿದ್ದಾರೆ.

ಘಟನೆಗೆ ಸಂಬಂಧಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News