ಜಂತರ್ ಮಂತರ್‌ಗೆ ತೆರಳದಂತೆ ತಡೆ : ರಿಕ್ಷಾ ಹತ್ತಿದ ಜಮ್ಮುಕಾಶ್ಮೀರ ಸಿಎಂ ಉಮರ್ ಅಬ್ದುಲ್ಲಾ

Update: 2026-07-20 23:39 IST

Photo Credit : PTI 

ಹೊಸದಿಲ್ಲಿ,ಜು.20: ಸೆಂಟ್ರಲ್ ದಿಲ್ಲಿಯಲ್ಲಿ ಜಾರಿಯಲ್ಲಿದ್ದ ನಿರ್ಬಂಧಗಳ ನಡುವೆ ಜಮ್ಮುಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಲು ಸೋಮವಾರ ಜಂತರ್ ಮಂತರ್ ಕಡೆಗೆ ತೆರಳುತ್ತಿದ್ದ ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ನಾಯಕರನ್ನು ಪೊಲೀಸರು ತಡೆದ ಬೆನ್ನಲ್ಲೇ, ಜಮ್ಮುಕಾಶ್ಮೀರ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರು ಪೃಥ್ವಿರಾಜ್ ರಸ್ತೆಯನ್ನು ತಲುಪಲು ಆಟೋರಿಕ್ಷಾ ಏರಿದರು.

ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನವಾದ ಸೋಮವಾರ ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಮತ್ತು ಉಮರ್ ಅಬ್ದುಲ್ಲಾ ನೇತೃತ್ವದಲ್ಲಿ ಎನ್ಸಿ ನಾಯಕರು ಹಾಗೂ ಕಾರ್ಯಕರ್ತರು ಜಮ್ಮುಕಾಶ್ಮೀರಕ್ಕೆ ತಕ್ಷಣವೇ ಪೂರ್ಣ ಪ್ರಮಾಣದ ರಾಜ್ಯದ ಸ್ಥಾನಮಾನವನ್ನು ಮರುಸ್ಥಾಪಿಸುವಂತೆ ಆಗ್ರಹಿಸಲು ದಿಲ್ಲಿಯಲ್ಲಿ ಜಮಾಯಿಸಿದ್ದರು.

ತನ್ನ ಆಟೋರಿಕ್ಷಾ ಪ್ರಯಾಣದ ವೀಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಉಮರ್ ಅಬ್ದುಲ್ಲಾ,‘ಜಂತರ್ ಮಂತರ್‌ನಿಂದ ನನ್ನ ನಡಿಗೆಯು ಮತ್ತೊಂದು ಮೆರವಣಿಗೆಯಾಗಿ ಬದಲಾಗುವಂತಿತ್ತು. ಆದ್ದರಿಂದ ನಾವು ಮೊದಲು ಸಿಕ್ಕ ಸಾರಿಗೆ ವಾಹನವನ್ನು ಬಳಸಿಕೊಂಡೆವು’ ಎಂದು ಹೇಳಿದ್ದಾರೆ.

ಪೃಥ್ವಿರಾಜ್ ರಸ್ತೆಯನ್ನು ತಲುಪಿದ ನಂತರ ಉಮರ್ ಅಬ್ದುಲ್ಲಾ ಆಟೋರಿಕ್ಷಾ ಚಾಲಕನಿಗೆ 500 ರೂ.ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News