Photo: PTI

ಹೊಸದಿಲ್ಲಿ: 2018ರ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಯೂಟ್ಯೂಬರ್ ಧ್ರುವ್ ರಾಠೀ ವಿರುದ್ಧ ದಿಲ್ಲಿಯ ನ್ಯಾಯಾಲಯ ಶನಿವಾರ ಜಾಮೀನು ನೀಡಬಹುದಾದ ವಾರಂಟ್ ಜಾರಿಗೊಳಿಸಿದೆ.

ಕಳೆದ ಏಳು ವರ್ಷಗಳಿಂದ ವಿದೇಶದಲ್ಲಿ ವಾಸಿಸುತ್ತಿರುವ ರಾಠೀ, ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಬಂದಿದ್ದಾರೆ ಎಂಬ ವಿಚಾರ ಈ ಬೆಳವಣಿಗೆಯ ಸಂದರ್ಭದಲ್ಲಿ ಗಮನ ಸೆಳೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಅವರಿಗೆ ಹೊಸದಾಗಿ ಸಮನ್ಸ್ ಜಾರಿಗೊಳಿಸಿತ್ತು. ಬಳಿಕ, ಶನಿವಾರ ಜಾಮೀನು ನೀಡಬಹುದಾದ ವಾರಂಟ್ ಹೊರಡಿಸಿದೆ.

ವೀಡಿಯೊ ವಿರುದ್ಧ ಮಾನನಷ್ಟ ದೂರು

ತಮ್ಮ ಯೂಟ್ಯೂಬ್ ಚಾನೆಲ್‌ ನಲ್ಲಿ ಬಿಜೆಪಿ ಐಟಿ ಸೆಲ್ ಸದಸ್ಯ ವಿಕಾಸ್ ಪಾಂಡೆ ಅವರ ವಿರುದ್ಧ ಧ್ರುವ್ ರಾಠೀ ವೀಡಿಯೊವೊಂದನ್ನು ಪ್ರಕಟಿಸಿದ್ದರು. ಈ ವೀಡಿಯೊದಿಂದ ತಮ್ಮ ಮಾನಹಾನಿಯಾಗಿದೆ ಎಂದು ಆರೋಪಿಸಿ ಪಾಂಡೆ ಅವರು 2018ರಲ್ಲಿ ರಾಠೀ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 31ರಂದು ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor