×
Ad

West Bengal | ನಿರ್ಮಾಣ ಹಂತದ ಗೋದಾಮಿನ ಶೆಡ್ ಕುಸಿತ: ಮೃತರ ಸಂಖ್ಯೆ 16ಕ್ಕೆ ಏರಿಕೆ

Update: 2026-06-27 10:48 IST

ಕೊಲ್ಕತ್ತಾ: ಪಶ್ಚಿಮ ಬಂಗಾಳದ ತರತಲ ಪ್ರದೇಶದಲ್ಲಿನ ನಿರ್ಮಾಣ ಹಂತದ ಗೋದಾಮಿನ ಶೆಡ್ ಕುಸಿತ ಸಂಭವಿಸಿ ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ ಎಂದು ಶನಿವಾರ ಅಧಿಕಾರಿಗಳು ತಿಳಿಸಿದ್ದಾರೆ.

ಮೃತರನ್ನು ರಾಹುಲ್ ಚೌಧರಿ (17), ಕೃಷ್ಣ ಚೌಧರಿ (49), ಚಂದ್ರಮ ಚೌಧರಿ (60), ರೋಹಿತ್ ಚೌಧರಿ (20), ಪಪ್ಪು ಕುಮಾರ್ ರಜಾಕ್ (40), ಘೀ ಕುಮಾರ್ (19), ಅಸ್ಗರ್ ಹುಸೈನ್ (54), ಸಾಹಿಲ್ ಸರ್ದಾರ್ (15), ಹುಸನ್ ಇಮಾಮ್ (44), ಗಣೇಶ್ ಕಲಿಂದಿ (45), ನವೀನ್ ಸಿಂಗ್ (44), ಮನ್ನು ಕುಮಾರ್ (19), ಸುಮಾರು 40 ವರ್ಷದ ಅಪರಿಚಿತ ಪುರುಷ, ಸ್ವಪನ್ ಮೊಂಡಲ್, ಸುಮಾರು 45 ವರ್ಷದ ಮತ್ತೊಬ್ಬ ಅಪರಿಚಿತ ಪುರುಷ ಹಾಗೂ ಖಾಲೇಕ್ ಸರ್ದಾರ್ (40) ಎಂದು ಗುರುತಿಸಲಾಗಿದೆ.

ಘಟನೆಯಲ್ಲಿ ಗಾಯಗೊಂಡಿರುವವರನ್ನು ದುರ್ಬಾಸ ಮೊಲ್ಲಾ (56), ಮಾಣಿಕ್ ಚಂದ್ ಕುಮಾರ್ (22), ಸೋಹಿದ್ ಕುಮಾರ್ (26), ವಿಶ್ವ ಪ್ರಕಾಶ್ (28), ರಾಜೇಶ್ ರೂಯಿದಾಸ್ (27), ಮಹಿಳೆಯಾದ ಬೋದನ್ ಮುಂಡಾ (31), ರಾಜೇಂದ್ರ ರಾಮ್ (55), ರಾಮ್ ಪ್ರಸಾದ್ ಚೌಧುರಿ (22), ಮುಹಮ್ಮದ್ ಅಬೀದ್ ಖಾನ್ (45), ಸೂರಜ್ ಚೌಧುರಿ (34), ಜೌಹಾರ್ ಅಲಿ ಗಯೇನ್ (25), ದೇಬಶಿಶ್ ದಾಸ್ (43), ಮುಹಮ್ಮದ್ ಸೋನು (35), ಸಂದೀಪ್ ಪಾಂಡೆ (31), ಮುಸ್ತಾಕಿಮ್ ಗಯೇನ್ (24), ರಾಜ್ ಕುಮಾರ್ ರಜಾಕ್ (40) ಹಾಗೂ ಕಾರ್ತಿಕ್ ಪಾತ್ರಾ (36) ಎಂದು ಗುರುತಿಸಲಾಗಿದೆ.

ಜೂನ್ 25ರಂದು ಈ ಘಟನೆ ನಡೆದಿದ್ದು, ಬ್ರೇಸ್ ಸೇತುವೆಯ ಬಳಿ ನಿರ್ಮಾಣ ಹಂತದಲ್ಲಿದ್ದ ಗೋದಾಮಿನ ಶೆಡ್ ಹಠಾತ್ತನೆ ಕುಸಿದು ಬಿದ್ದಿತ್ತು. ಈ ವೇಳೆ ಹಲವಾರು ಕಾರ್ಮಿಕರು ಅವಶೇಷಗಳಡಿ ಸಿಲುಕಿಕೊಂಡಿದ್ದರು. ಘಟನೆ ಬೆನ್ನಿಗೇ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿತ್ತು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News