×
Ad

‘ಯೂಸರ್‌ನೇಮ್’ ವೈಶಿಷ್ಟ್ಯದ ಬಗ್ಗೆ ಸರಕಾರಕ್ಕೆ ಉತ್ತರ ಸಲ್ಲಿಸಿದ ವಾಟ್ಸ್‌ಆ್ಯಪ್

Update: 2026-07-10 22:20 IST

ಹೊಸದಿಲ್ಲಿ, ಜು. 10: ವಾಟ್ಸ್‌ಆ್ಯಪ್‌ನ ಪ್ರಸ್ತಾಪಿತ ‘ಯೂಸರ್‌ನೇಮ್’ ವೈಶಿಷ್ಟ್ಯದ ಬಗ್ಗೆ ಕೇಂದ್ರ ಸರಕಾರ ನೀಡಿರುವ ನೋಟಿಸ್‌ಗೆ ಅದು ಉತ್ತರ ಸಲ್ಲಿಸಿದೆ ಹಾಗೂ ಅದನ್ನು ಈಗ ಪರಿಶೀಲಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಈ ವೈಶಿಷ್ಟ್ಯವು ಆನ್‌ಲೈನ್ ವಂಚನೆ, ನೈಜ ಸಂಸ್ಥೆಗಳ ಹೆಸರಿನಲ್ಲಿ ಮಾಹಿತಿ ಕದಿಯುವುದು (ಫಿಶಿಂಗ್), ಇನ್ನೊಬ್ಬರ ಹೆಸರಿನಲ್ಲಿ ವ್ಯವಹರಿಸುವುದು ಮತ್ತು ತಥಾಕಥಿತ ಡಿಜಿಟಲ್ ಬಂಧನ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಬಹುದು ಎಂಬ ಭೀತಿಯ ಬಗ್ಗೆ ವಿವರಣೆ ನೀಡುವಂತೆ ಸರಕಾರ ವಾಟ್ಸ್‌ಆ್ಯಪ್‌ಗೆ ಸೂಚಿಸಿತ್ತು. ವಾಟ್ಸ್‌ಆ್ಯಪ್ ನೀಡಿರುವ ಉತ್ತರ ಗುರುವಾರ ರಾತ್ರಿ ತಲುಪಿದೆ.

ಸಮಾಲೋಚನೆಗಳು ಪೂರ್ಣಗೊಳ್ಳುವವರೆಗೆ ಈ ವೈಶಿಷ್ಟ್ಯವನ್ನು ಭಾರತದಲ್ಲಿ ಅನುಷ್ಠಾನಕ್ಕೆ ತರದಂತೆ ವಾಟ್ಸ್‌ಆ್ಯಪ್‌ಗೆ ಸರಕಾರ ಈಗಾಗಲೇ ಸೂಚನೆ ನೀಡಿದೆ.

ವಾಟ್ಸ್‌ಆ್ಯಪ್‌ನ ಪ್ರಸ್ತಾವಿತ ‘ಯೂಸರ್‌ನೇಮ್’ ಎಂಬ ನೂತನ ವೈಶಿಷ್ಟ್ಯದ ಮೂಲಕ ಬಳಕೆದಾರರು ತಮ್ಮ ಫೋನ್‌ಸಂಖ್ಯೆಗಳನ್ನು ಕೊಡದೆಯೇ ಇತರ ಬಳಕೆದಾರರೊಂದಿಗೆ ಸಂವಹನ ನಡೆಸಬಹುದಾಗಿದೆ.

ಈ ಬಗ್ಗೆ ವಿವರಣೆ ನೀಡುವಂತೆ ಕೋರಿ ಸರಕಾರವು ಕಳೆದ ಬುಧವಾರ ವಾಟ್ಸ್‌ಆ್ಯಪ್‌ಗೆ ನೋಟಿಸ್ ನೀಡಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News