ಗೋಣಿಗರನ್ನು ಕೆಲವು ಭಾಗಗಳಲ್ಲಿ ‘ಭಜಂತ್ರಿ’ ಎಂದೂ ಕರೆಯುತ್ತಾರೆ. ಮತ್ತೆ ಕೆಲವು ಕಡೆ ಗೋಣಿಗರನ್ನು ‘ಸಾಧುಶೆಟ್ಟಿ’ ಎಂದೂ ಕರೆಯುತ್ತಾರೆ. ಇದರ ಉಪಜಾತಿಯೇ ಜನಪ್ಪನ್, ಈ ಜನಪ್ಪನ್‌ರನ್ನು ಜನಪರು, ಜನಪ, ಜನಪ ಶೆಟ್ಟಿ, ಜನಪ ಚೆಟ್ಟಿ, ಜನಪನ್ ಶೆಟ್ಟಿ, ಜನಪನ್ ಶೆಟ್ನಿ ಮುಂತಾಗಿ ಕರೆಯುತ್ತಾರೆ. ತಮಿಳು ಭಾಷೆಯಲ್ಲಿ ಇವರನ್ನು ಸಲುಪ, ಸಲುಪರು ಮತ್ತು ಸಲುಪನ್ ಎಂತಲೂ ಕರೆಯುತ್ತಾರೆ.

‘ಗೋಣಿಗ’ರದು ಸಾಂಪ್ರದಾಯಿಕ ಕುಲವೃತ್ತಿ ಗೋಣಿ ಚೀಲ, ಜೂಟ್ ಬ್ಯಾಗ್, ಹಗ್ಗ, ಟಾಟ್, ಬುಟ್ಟಿ ತಯಾರಿಕೆ ಮತ್ತು ಹೊಲಿಗೆ ಮಾಡುವುದು

ಗೋಣಿಗರನ್ನು ಕೆಲವು ಭಾಗಗಳಲ್ಲಿ ‘ಭಜಂತ್ರಿ’ ಎಂದೂ ಕರೆಯುತ್ತಾರೆ. ಮತ್ತೆ ಕೆಲವು ಕಡೆ ಗೋಣಿಗರನ್ನು ‘ಸಾಧುಶೆಟ್ಟಿ’ ಎಂದೂ ಕರೆಯುತ್ತಾರೆ. ಇದರ ಉಪಜಾತಿಯೇ ಜನಪ್ಪನ್, ಈ ಜನಪ್ಪನ್‌ರನ್ನು ಜನಪರು, ಜನಪ, ಜನಪ ಶೆಟ್ಟಿ, ಜನಪ ಚೆಟ್ಟಿ, ಜನಪನ್ ಶೆಟ್ಟಿ, ಜನಪನ್ ಶೆಟ್ನಿ ಮುಂತಾಗಿ ಕರೆಯುತ್ತಾರೆ. ತಮಿಳು ಭಾಷೆಯಲ್ಲಿ ಇವರನ್ನು ಸಲುಪ, ಸಲುಪರು ಮತ್ತು ಸಲುಪನ್ ಎಂತಲೂ ಕರೆಯುತ್ತಾರೆ.

ಉತ್ತರ ಕರ್ನಾಟಕದ ವಿಜಯಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ, ರಾಯಚೂರು ಭಾಗದಲ್ಲಿ ಹೆಚ್ಚು ಜನ ಇರುವ ಈ ಗೋಣಿಗ ಸಮುದಾಯ ಸೆಣಬಿನ ನಾರಿನಿಂದ ಗೋಣಿ ಚೀಲಗಳನ್ನು ಹೊಲಿಯುವುದು ಇವರ ಕುಲವೃತ್ತಿ. ಹಿಂದೆ ಹತ್ತಿ ಮತ್ತು ಸೆಣಬಿನಿಂದ ಗೋಣಿಚೀಲ ಹೊಲಿಯುತ್ತಿದ್ದರು. ‘‘ಗೋಣಿಚೀಲ ಹೊಲಿಯಲಿಕ್ಕೂ ಒಂದು ಜಾತಿ ಇದೆಯೆಲ್ಲ’’ ಎಂಬುದೇ ಕೆಲವರಿಗೆ ಅಚ್ಚರಿ!

ಗೋಣಿಗರ ಭಾಷೆ ಕನ್ನಡ, ಮರಾಠಿ ಮತ್ತು ಮರಾಠಿ ಮಿಶ್ರಿತ ಕನ್ನಡ. ಈಚೆಗೆ ಪ್ಲಾಸ್ಟಿಕ್ ಬ್ಯಾಗುಗಳು ಮತ್ತು ಪ್ಯಾಕೇಜ್ ಮೆಟೀರಿಯಲ್ಸ್ ಬಂದ ಮೇಲೆ ಇವರ ಕುಲವೃತ್ತಿಗೆ ಪೆಟ್ಟು ಬಿದ್ದಿದೆ.

ಗೋಣಿಗರಲ್ಲಿ ಎರಡು ಉಪಪಂಗಡಗಳಿದ್ದು, ಒಂದು ಪಂಗಡದವರನ್ನು ಅಡವಿ ಗೋಣಿಗ ಎಂದು ಕರೆಯುತ್ತಾರೆ, ಇವರು ಹಿಂದೆ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಇನ್ನೊಂದು ಪಂಗಡವನ್ನು ‘ಕಬಳಿಗೇರ’ ಅಥವಾ ‘ಗೋಣಿಗೇರ’ ಅಂತಲೇ ಕರೆಯುತ್ತಾರೆ. ಕರ್ನಾಟಕದಲ್ಲಿ ಗೋಣಿಗರ ಸಮುದಾಯದ ಉಪಜಾತಿಯಾದ ‘ಜನಪ್ಪನ್’ ಅನ್ನು ‘ಬಲಿಜ’ ‘ಬಲಜಿಗ’ ಸಮುದಾಯದ ಉಪಜಾತಿಯೆಂದು ಗುರುತಿಸಲಾಗಿದ್ದು ಈ ಸೇರ್ಪಡೆ ಸರಿಯಲ್ಲ ಎಂದಿರುವ ‘ಜನಪ್ಪನ್’ ಶೆಟ್ಟರ ಸಂಘ ತಮ್ಮನ್ನು ಸಾಧುಶೆಟ್ಟಿ ಅಥವಾ ಗೋಣಿಗ ಜಾತಿಯ ಉಪಜಾತಿಯಾಗಿ ಗುರುತಿಸಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ನೀಡಿದೆ. ಇದೀಗ ಜನಪ್ಪನ್ ಜಾತಿಯನ್ನು ಬಲಿಜ ಜಾತಿಯ ಉಪಜಾತಿಯಾಗಿ ಸೇರಿಸಿರುವುದರಿಂದ ಬಲಿಜ ಜಾತಿಯ ಪಟ್ಟಿಯ ಗೊಂದಲದಲ್ಲಿ ಜನಪ್ಪನ್ ಉಪಜಾತಿಯನ್ನೂ ಸೇರಿಸಿದ್ದಾರೆ. ಬಲಿಜ ಸಮುದಾಯ ಶಿಕ್ಷಣಕ್ಕೆ ಪ್ರವರ್ಗ 2(ಎ) ಇದ್ದು ಉದ್ಯೋಗಕ್ಕೆ ಪ್ರವರ್ಗ 3(ಎ)ನಲ್ಲಿ ಸೇರಿಸಲಾಗಿದೆ. ಈ ಕಾರಣಕ್ಕೆ ಬಲಿಜ ಸಮುದಾಯದೊಂದಿಗೆ ಜನಪ್ಪನ್ ಸಮುದಾಯದ ಮಕ್ಕಳು ಶಿಕ್ಷಣ, ಉದ್ಯೋಗ ಮೀಸಲಾತಿಯಲ್ಲಿ ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಅದರಲ್ಲೂ ಜಾತಿ ಪ್ರಮಾಣಪತ್ರ ಪಡೆಯುವಲ್ಲಿ ಬಹಳ ಕಷ್ಟವಾಗುತ್ತಿದೆ.

ಕೇಂದ್ರ ಸರಕಾರದ ಔಃಅ ಪಟ್ಟಿಯಲ್ಲಿಯೂ ಇವರದು ಗೊಂದಲವಿದೆ.ACentral List of OBCs for the State of Karnatakaಗೆ ಸಂಬಂಧಿಸಿದ ದಾಖಲೆಗಳ ಪ್ರಕಾರ, ಕೇಂದ್ರ ಔಃಅ ಪಟ್ಟಿಯ ಕ್ರಮಸಂಖ್ಯೆ 82ರಲ್ಲಿ ಜನಪನ್, ಜನಪರ್, ಜನಪಚೆಟ್ಟಿ, ಜನಪ್ಪಶೆಟ್ಟಿ ಜಾತಿಗಳು ‘ಸಾಧುಶೆಟ್ಟಿ’ ಜಾತಿಯ ಅಡಿಯಲ್ಲಿವೆ. ಅದೇ ಪಟ್ಟಿಯ ಕ್ರಮ ಸಂಖ್ಯೆ 167 ಜನಪ್ಪನ್ ಎಂಬುದು ‘ಬಲಿಜ’ ಸಮುದಾಯದ ಅಡಿಯಲ್ಲಿ ಉಲ್ಲೇಖವಾಗಿದೆ. ಆದ್ದರಿಂದ, ಮೇಲ್ಕಂಡ ಕ್ರಮ ಸಂಖ್ಯೆ 82 ಮತ್ತು ಕ್ರಮಸಂಖ್ಯೆ 167ರ ದಾಖಲೆಗಳನ್ನು ಮೂಲ ಕೇಂದ್ರ ಸರಕಾರದ ಅಧಿಸೂಚನೆಗಳು/ಅಧಿಕೃತ ಪ್ರತಿಗಳೊಂದಿಗೆ ಪರಿಶೀಲಿಸಿ, Janapan/Janapar/Janapachetty/ Janapashetty/Janapasetty ಮತ್ತು Janappan ಹೆಸರುಗಳ ನಡುವಿನ ಐತಿಹಾಸಿಕ, ಸಾಮಾಜಿಕ, ಭಾಷಾ ಹಾಗೂ ಆಡಳಿತಾತ್ಮಕ ಸಂಬಂಧವನ್ನು ಕರ್ನಾಟಕ ರಾಜ್ಯದ ಜಾತಿ ವರ್ಗೀಕರಣದ ಸಂದರ್ಭದಲ್ಲಿ ಪರಿಗಣಿಸಬೇಕಿದೆ.

ಗೋಣಿಗ ಅಥವಾ ಜನಪ್ಪನ್ ಸಮುದಾಯದ ಜನಸಂಖ್ಯೆ ಒಂದೂವರೆ ಲಕ್ಷ ಇರಬಹುದಷ್ಟೇ. ಕುಲವೃತ್ತಿ ಕಳಕೊಂಡ ಈಗಿನ ಸಮುದಾಯದ ಉದ್ಯೋಗ ಗೋಣಿಚೀಲ ಹೊಲಿಗೆ ಬಿಟ್ಟು ದಿನಗೂಲಿ, ಕೃಷಿ, ಬ್ಯಾಂಡ್ ಬಾಜ, ಟೈಲರಿಂಗ್ ನಂತಹ ಕೆಲಸಗಳನ್ನು ಮಾಡುತ್ತಿದ್ದಾರೆ.

ಜನಪನ್ ಸಮುದಾಯ ಜನಸಂಖ್ಯೆ ದೃಷ್ಟಿಯಿಂದ ಕೊಂಚ ಕಣ್ಣಿಗೆ ಕಾಣಿಸುವಂತೆ ಇರುವುದು ಕನಕಪುರದಲ್ಲಿ. ಮಿಕ್ಕಂತೆ ಈ ಸಮುದಾಯ ಕರ್ನಾಟಕದ ಇತರ ಭಾಗಗಳಲ್ಲಿ ವಿರಳವಾಗಿದೆ. ಕನಕಪುರದಲ್ಲಿ ಮಾತ್ರ ಸುಮಾರು ಹತ್ತು ಸಾವಿರ ಜನಸಂಖ್ಯೆ ಇದೆಯೆಂದು ‘ಜನಪನ್ ಸಂಘ’ ಹೇಳುತ್ತದೆ. ಅಂತೆಯೇ ತಮ್ಮ ಮತ್ತು ಬಲಿಜ ಸಮುದಾಯ ಮತ್ತು ಸಾಧುಶೆಟ್ಟಿ ಸಮುದಾಯಗಳ ನಡುವಿನ ಗೊಂದಲವನ್ನು ಪರಿಹರಿಸಬೇಕೆಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಮತ್ತು ಹಿಂದಿನ ಮುಖ್ಯಮಂತ್ರಿಗಳಿಗೆ ಅನೇಕ ಸಲ ಮನವಿ ಮಾಡಿದೆ. ಜನಸಂಖ್ಯೆ ದೃಷ್ಟಿಯಿಂದ ಅತಿ ಕಡಿಮೆಯಿರುವ ಈ ಅತಿಸೂಕ್ಷ್ಮ ಸಮುದಾಯವನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಈಚೆಗೆ ಇವರ ಮನವಿ ಈಗಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ರವರಿಗೆ ಮುಟ್ಟಿದ್ದು ಮುಖ್ಯಮಂತ್ರಿ ಸ್ಪಂದಿಸಿದ್ದಾರೆ. ಈ ವಾರದಲ್ಲಿ ಜನಪ್ಪನ್ ಸಂಘದವರನ್ನು ಅವರು ಚರ್ಚೆಗೆ ಕರೆದಿದ್ದಾರೆ. ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಅತ್ಯಂತ ಹಿಂದುಳಿದಿರುವ ಈ ಅಸಹಾಯಕ ಸಮುದಾಯಕ್ಕೆ ಕನಿಷ್ಠ ಈಗಿನ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರಿಂದಲಾದರೂ ಸಹಾಯವಾಗಲಿ ಎಂದು ಹಾರೈಸೋಣ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸಿ.ಎಸ್. ದ್ವಾರಕಾನಾಥ್

contributor