ರಾಯಚೂರು: ಬೋಧ ಗಯಾ ಟೆಂಪಲ್ ಆ್ಯಕ್ಟ್ 1949 ರದ್ದುಗೊಳಿಸಲು ಬುದ್ಧ ವಿಹಾರ ಸಂಘಟನೆಯಿಂದ ಮನವಿ
ರಾಯಚೂರು: ಬೋಧ ಗಯಾ ಟೆಂಪಲ್ ಆಕ್ಟ್ 1949 ರದ್ದುಗೊಳಿಸಿ ಬುದ್ಧವೇದ ಮಹಾಬೋಧಿ ಮಹಾವೀರದ ಆಡಳಿತವನ್ನು ಸಂಪೂರ್ಣವಾಗಿ ಬೌದ್ದರಿಗೆ ನೀಡಬೇಕೆಂದು ಸಿದ್ದಾರ್ಥ ಬುದ್ಧ ವಿಹಾರ ಸಂಘಟನೆ ವತಿಯಿಂದ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ, ಕೇಂದ್ರ ಮತ್ತು ಬಿಹಾರ್ ರಾಜ್ಯ ಸರ್ಕಾರಕ್ಕೆ ಸೂಕ್ತ ಶಿಫಾರಸು ಮಾಡಲು ಮನವಿ ಸಲ್ಲಿಸಲಾಯಿತು.
ಬೋಧಗಯಾ ಟೆಂಪಲ್ ಆವರಣದಲ್ಲಿ ಅತಿಕ್ರಮಣ ಮಾಡಿಕೊಂಡು ಜಾಗವನ್ನು ಸಂಪೂರ್ಣವಾಗಿ ಬೌದ್ದರಿಗೆ ನೀಡಬೇಕು, ಉದ್ದೇಶಪೂರ್ವಕವಾಗಿ ನಡೆಯುವ ಹಿಂದೂ ಧರ್ಮದ ಕ್ರಿಯಾ ಚಟುವಟಿಕೆಗಳಿಗೆ ಸರ್ಕಾರ ಕೂಡಲೇ ಕಡಿವಾಣ ಹಾಕಬೇಕು. ಕರ್ನಾಟಕ ಸರ್ಕಾರ ಕಳೆದ ಬಜೆಟ್ ನಲ್ಲಿ ಘೋಷಿಸಿರುವಂತೆ ಐತಿಹಾಸಿಕ ಕ್ಷೇತ್ರ ಸನ್ನತಿ ಅಭಿವೃದ್ಧಿ ಪ್ರಾಧಿಕಾರ ವನ್ನು ಪೂರ್ಣ ಪ್ರಮಾಣದಲ್ಲಿ ರಚಿಸಿ ಸನ್ನತಿ ಅಭಿವೃದ್ಧಿ ಪ್ರಾಧಿಕಾರದ ಯೋಜನೆಯನ್ನು ಆಂಧ್ರದ ಬುದ್ಧವನ ಮಾದರಿಯಲ್ಲಿ ಕನಿಷ್ಠ ಎರಡು ನೂರು ಎಕರೆ ಪ್ರದೇಶದಲ್ಲಿ ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿಪಡಿಸಿ ಸನ್ನತಿಯನ್ನು 7 ಸ್ಟಾರ್ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಮಾಡಬೇಕು ಎಂದು ಮನವಿ ಮಾಡಿದರು.
ಸಾಮಾಜಿಕ ಆರ್ಥಿಕ ಅಭಿವೃದ್ಧಿಗಾಗಿ ಬೌದ್ಧ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು, ಪ್ರತಿ ವರ್ಷ ಗೌತಮ ಬುದ್ಧ ಜಯಂತಿಗೆ ಸಾರ್ವತ್ರಿಕ ರಜೆ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಎಲ್ಲಾ ಬುದ್ಧ ವ್ಯವಹಾರಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಬೇಕು, ರಾಜ್ಯದಲ್ಲಿರುವ ಸಾಮ್ರಾಟ ಅಶೋಕರ ಶಿಲಾ ಶಾಸನಗಳನ್ನು ಸಂರಕ್ಷಿಸಲು ವಿಶೇಷ ಯೋಜನೆ ರೂಪಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಿದ್ದಾರ್ಥ ಬುದ್ಧ ವಿಹಾರದ ಸಂಘಟನಾ ಕಾರ್ಯದರ್ಶಿ ತಿಮ್ಮ ಗುರು, ಸದಸ್ಯರಾದ ಎಚ್ ಆಂಜನೇಯ, ದೇವೇಂದ್ರ ದಾದಸ್, ಆರ್ ನರಸಿಂಹಲು ಇದ್ದರು.