Raichur | ಗಾಂಜಾ ಮಾರಾಟ: ಇಬ್ಬರು ಆರೋಪಿಗಳ ಬಂಧನ
1.1 ಕೆಜಿ ಗಾಂಜಾ ವಶ
ರಾಯಚೂರು: ಸಿಂಧನೂರು ತಾಲೂಕಿನ ಅಂಬಾಮಠದಲ್ಲಿ ನಡೆಯುತ್ತಿದ್ದ ಶ್ರೀ ಅಂಬಾದೇವಿ ಜಾತ್ರೆ ವೇಳೆ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಸಿಂಧನೂರು ಗ್ರಾಮೀಣ ಪೊಲೀಸರು ಬಂಧಿಸಿ, 1.1 ಕೆ.ಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಹೊಸಪೇಟ ಮೂಲದ ಆಜಂ ಶೋಯೇಲ್ ಹಾಗೂ ಮಹ್ಮದ್ ಶಾಬಾಜ್ ಬಂಧಿತ ಆರೋಪಿಗಳು.
ಗಾಂಜಾ ಮಾರಾಟದ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷುಗಿರಿ ತಿಳಿಸಿದ್ದಾರೆ.
ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‍ಐ ಮೌನೇಶ ರಾಠೋಡ್ ಅವರು ಸಿಬ್ಬಂದಿಗಳಾದ ದೌಲತ್‍ಸಾಬ್, ದೇವರೆಡ್ಡಿ, ಗೋಪಾಲ, ಮಲ್ಲಪ್ಪ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು.
ಬಂಧಿತರಿಂದ ಅಂದಾಜು 1.10 ಲಕ್ಷ ಮೌಲ್ಯದ 1100 ಗ್ರಾಂ ಒಣಗಿದ ಗಾಂಜಾ, 4 ಸಣ್ಣ ಕಾಗದದ ಚೀಟಿಗಳಲ್ಲಿ ಕಟ್ಟಿದ ಗಾಂಜಾ, ಚೀಟಿ ಕಟ್ಟಲು ಬಳಸುತ್ತಿದ್ದ 10 ಬಿಳಿ ಕಾಗದದ ಚೀಟಿಗಳು ಹಾಗೂ ಮಹ್ಮದ್ ಶಾಬಾಜ್ ಬಳಿ ಸಿಕ್ಕ 550 ರೂ.ನಗದು ಹಣವನ್ನು ಜಪ್ತಿ ಮಾಡಲಾಗಿದೆ.
ಬಂಧಿತರ ವಿರುದ್ಧ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಹರೀಶ.ಜಿ, ಸಿಂಧನೂರು ಡಿಎಸ್‍ಪಿ ಚಂದ್ರಶೇಖರ.ಜಿ ಹಾಗೂ ಸಿಂಧನೂರು ಗ್ರಾಮೀಣ ವೃತ್ತದ ಸಿಪಿಐ ವಿನಾಯಕ ಅವರ
ಮಾರ್ಗದರ್ಶನದಲ್ಲಿ ಜ.4ರಂದು ಈ ದಾಳಿ ನಡೆಸಲಾಗಿತ್ತು.
ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷುಗಿರಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.