×
Ad

ಕಲ್ಯಾಣ ಕರ್ನಾಟಕಕ್ಕೆ 8 ಸಚಿವ ಸ್ಥಾನ, ವಿಶೇಷ ನೇಮಕಾತಿ ಸ್ಥಾಪಿಸಬೇಕು: ರಾಘವೇಂದ್ರ ಕುಷ್ಠಗಿ

Update: 2026-06-04 20:38 IST

ರಾಯಚೂರು: ಪ್ರೊ.ನಂಜುಂಡಪ್ಪ ವರದಿಯ ಶಿಫಾರಸ್ಸಿನಂತೆ ರಾಜ್ಯದಲ್ಲಿ ಶೇ.25 ರಷ್ಟು ಸಚಿವ ಸ್ಥಾನ ಈ ಭಾಗದ ಶಾಸಕರಿಗೆ ನೀಡಬೇಕು. ಡಿ.ಕೆ. ಶಿವಕುಮಾರ್ ಸಚಿವ ಸಂಪುಟದಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ 8 ಸಚಿವ ಸ್ಥಾನ ನೀಡಬೇಕು ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಹೋರಾಟ ಸಮಿತಿ ಸಂಚಾಲಕ ರಾಘವೇಂದ್ರ ಕುಷ್ಟಗಿ ಆಗ್ರಹಿಸಿದರು.

ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಯಿಂದ ಶಿಕ್ಷಕರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳ ನೇಮಕಾತಿ ವಿಶೇಷ ನೇಮಕಾತಿ ಪ್ರಾಧಿಕಾರ ಸ್ಥಾಪಿಸಬೇಕು ಎಂದು

ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಸೇರಿ 14 ಜನರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೆ ಕಲಬುರಗಿ ಇಬ್ಬರು, ಬೀದರನ ಒಬ್ಬರಿಗೆ ಸಚಿವ ಸ್ಥಾನ ನೀಡಲಾಗಿದೆ. 8 ಸಚಿವ ಸ್ಥಾನಗಳು ಈ ಭಾಗಕ್ಕೆ ನೀಡಬೇಕಿದೆ. ರಾಯಚೂರು, ಯಾದಗಿರಿ, ಕೊಪ್ಪಳ, ಬಳ್ಳಾರಿ ಸೇರಿದಂತೆ ಏಳು ಜಿಲ್ಲೆಗಳ ಒಬ್ಬ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಎಂದರು.

ಈ ಹಿಂದೆ ಸಿದ್ದರಾಮಯ್ಯನವರ‌ ಸರ್ಕಾರದಲ್ಲಿ ಈ ಬಾಗದವರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಈ ಬಾರಿ ಅನ್ಯಾಯವಾಗದಂತೆ ಎಚ್ಚರವಹಿಸಬೇಕು. ನಿಗಮ, ಮಂಡಳಿ, ವಿವಿಧ ಪ್ರಶಸ್ತಿಗಳಿಗೂ ಶೇ.25 ಸ್ಥಾನಗಳನ್ನು ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡಬೇಕು ಎಂದರು.

ಹಿಂದಿನ ಸರ್ಕಾರ ಕಲ್ಯಾಣ ಕರ್ನಾಟಕ ಅಭಿವೃದ್ದಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವದಾಗಿ ಭರವಸೆ ನೀಡಿತ್ತು. ನುಡಿದಂತೆ ನಡೆಯುದಾದರೆ ಸಚಿವಾಲಯಕ್ಕೆ ಸಚಿವರನ್ನಾಗಿ ನೇಮಿಸಬೇಕು. ಕಲಬುರಗಿ ಜಿಲ್ಲೆಗೆ ಮಾತ್ರ ಅಧಿಕಾರ ಸೀಮಿತವಾಗಿಸದೇ ಎಲ್ಲಾ ಜಿಲ್ಲೆಗಳಿಗೂ ಉಸ್ತುವಾರಿ ಸಚಿವರನ್ನಾಗಿಸಬೇಕು.

ರಾಯಚೂರಿನವರಿಗೆ ಸಚಿವ ಸ್ಥಾನ ನೀಡಿ ಉಸ್ತುವಾರಿಯನ್ನಾಗಿ ಮಾಡಬೇಕು. ಬಿಜೆಪಿ ಅಧಿಕಾರ ಅವಧಿಯೂ ಸೇರಿದಂತೆ ಬೇರೆ ಜಿಲ್ಲೆಯವರು ಉಸ್ತುವಾರಿ ಸಚಿವರನ್ನಾಗಿಸುವ ಪರಿಪಾಠವನ್ನು ನಿಲ್ಲಿಸಿ ಸ್ಥಳೀಯರಿಗೆ ಸಚಿವ ಸ್ಥಾನ ನೀಡಿ ಉಸ್ತುವಾರಿ ಸಚಿವರನ್ನಾಗಿಸಬೇಕು. ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿ ಗಂಜಿ ಕೇಂದ್ರವನ್ನಾಗಿಸದೇ ಅಭಿವೃದ್ದಿ ಬೇಕಾದ ಅನುದಾನ, ಹಣಕಾಸಿನ ಸದ್ಭಳಕೆಯಬದ್ದತೆ ತೋರಿಸಬೇಕಿದೆ. 30 ಸಾವಿರ ಶಿಕ್ಷಕರ ಹುದ್ದೆಗಳು ಈ ಭಾಗದಲ್ಲಿ ಖಾಲಿಯಿವೆ, ಆರೋಗ್ಯ ಇಲಾಖೆಯಲ್ಲಿ ವೈಧ್ಯರು ಸೇರಿದಂತೆ ವೈಧ್ಯಕೀಯೇತರ ಹುದ್ದೆಗಳು ಖಾಲಿಯಾಗಿವೆ. ಕೆಕೆಆರ್‍ ಡಿಬಿಯಿಂದ ಪ್ರತ್ಯೇಕ ನೇಮಕಾತಿ ಪ್ರಾಧಿಕಾರ ಸ್ಥಾಪಿಸಿ ನೇಮಕಾತಿ ನಡೆಸಬೇಕು. ಇತ್ತೀಚಿಗೆ ಏಳೂ ಜಿಲ್ಲೆಗಳಲ್ಲಿಯೂ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದೆ.ಸರ್ಕಾರ ಸ್ಪಂದಿಸದೇ ಹೋದರೆ ಸಾರ್ವಜನಿಕರ ಪ್ರತಿರೋಧ ಎದುರಿಸಬೇಕಾಗುತ್ತದೆ ಎಂದರು.

ಡಾ.ಶಾರದಾ ಹುಲಿನಾಯಕ ಮಾತನಾಡಿ, ಡಿ.ಕೆ.ಶಿವಕುಮಾರ್ ನೇತೃತ್ವದ ಸಚಿವ ಸಂಪುಟದಲ್ಲಿ ಒಬ್ಬ ಮಹಿಳೆಗೂ ಸಚಿವ ಸ್ಥಾನ ನೀಡದೇ ಕಾಂಗ್ರೆಸ್ ಲಿಂಗತಾರತಮ್ಯ ಮಾಡಿದೆ. ಕೂಡಲೇ ಸರಿಪಡಿಸಿ ಮಹಿಳೆಗೆ ಸಚಿವ ಸ್ಥಾನ ನೀಡಬೇಕೆಂದರು.

ಬಿ.ಬಸವರಾಜ, ಜಾನವೆಸ್ಲಿ ಕಾತರಕಿ, ಆರ್.ಬಸವರಾಜ, ಕವಿತಾ ಭಾಸ್ಕರ, ಹರವಿ ನಾಗನಗೌಡ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News