×
Ad

ರಾಯಚೂರು | ರಾಜ್ಯದ ಪ್ರವಾಸಿ ತಾಣಗಳಲ್ಲಿ ಬೈಕ್ ಟ್ಯಾಕ್ಸಿ ಪರವಾನಗಿ ರದ್ದುಪಡಿಸಲು ಒತ್ತಾಯಿಸಿ ಆಟೋ ಚಾಲಕರಿಂದ ಪತ್ರ ಚಳವಳಿ

Update: 2025-09-19 16:55 IST

ರಾಯಚೂರು: ರಾಜ್ಯ ಸರ್ಕಾರ ಪ್ರವಾಸಿ ತಾಣಗಳ ಸುತ್ತಲೂ ಖಾಸಗಿ ಎಜೆನ್ಸಿಗಳಿಗೆ ಬೈಕ್ ಮತ್ತು ಟ್ಯಾಕ್ಸಿ ಸೇವೆಗೆ ಪರವಾನಗಿ ನೀಡಿರುವ ಕ್ರಮವನ್ನು ಖಂಡಿಸಿ, ಆಟೋ ಚಾಲಕರು ಪತ್ರ ಚಳವಳಿ ನಡೆಸಿದರು.

ಕರ್ನಾಟಕ ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್ಸ್ (ಸಿಐಟಿಯು) ಸಂಯೋಜಿತ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಮುಕರ್ರಮ್ ಗಂಜ್ ಅಂಚೆ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಯಿತು.

ರಾಜ್ಯದಲ್ಲಿ 8 ಲಕ್ಷಕ್ಕೂ ಹೆಚ್ಚು ಆಟೋ ಚಾಲಕರು ಕುಟುಂಬ ಸಮೇತ ಜೀವನ ಸಾಗಿಸುತ್ತಿದ್ದಾರೆ. ಆದರೆ, ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ನೀಡಿರುವುದರಿಂದ ಆಟೋ ಚಾಲಕರ ಬದುಕು ಸಂಕಷ್ಟಕ್ಕೀಡಾಗುವ ಭೀತಿ ಎದುರಾಗಿದೆ. ಸರ್ಕಾರವು ತಕ್ಷಣ ಈ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಲಾಯಿತು.

ಪ್ರತಿಭಟನೆಯಲ್ಲಿ ಸಿಐಟಿಯು ಆಟೋ ಯೂನಿಯನ್ ಅಧ್ಯಕ್ಷ ಜಿಲಾನಿ ಪಾಷ, ಡಿ.ಎಸ್. ಶರಣಬಸವ, ಗೋಪಾಲ, ಮಾರ್ಕಂಡ, ಹನುಮಂತು, ನಲ್ಲಾರೆಡ್ಡಿ, ದೇವಣ್ಣ, ನಂಬಿ ಸಾಬ್, ಸಲ್ಲಿಂ, ವೆಂಕಟೇಶ್, ಕೆ.ಹನುಮಂತ ಸೇರಿದಂತೆ ಹಲವರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News