×
Ad

ರಾಯಚೂರು ಬಿಜೆಪಿ ಪಕ್ಷದ ನೂತನ ಪದಾಧಿಕಾರಿಗಳ ನೇಮಕ

Update: 2025-12-28 13:56 IST

ರಾಯಚೂರು:ಭಾರತೀಯ ಜನತಾ ಪಕ್ಷದ ರಾಜ್ಯಾದ್ಯಂತ ನಡೆಯುತ್ತಿರುವ ಸಂಘಟನಾ ಪರ್ವದ ಭಾಗವಾಗಿ ರಾಯಚೂರು ಜಿಲ್ಲೆಯ ಬಿಜೆಪಿ ಪಕ್ಷದ ಜಿಲ್ಲಾಮಟ್ಟದ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರನಗೌಡ ಬಿ. ಪಾಟೀಲ್ ಲೆಕ್ಕಿಹಾಳ ಆದೇಶ ಹೊರಡಿಸಿದ್ದಾರೆ.

ಪಕ್ಷಕ್ಕಾಗಿ ಹಲವು ವರ್ಷಗಳಿಂದ ಶ್ರಮಿಸುತ್ತಿರುವ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ಜವಾಬ್ದಾರಿ ನೀಡಲಾಗಿದ್ದು, ಜೊತೆಗೆ ಹೊಸ ಕಾರ್ಯಕರ್ತರಿಗೂ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿದುಬಂದಿದೆ.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ ಶಂಕರರೆಡ್ಡಿ, ಶರಣಪ್ಪಗೌಡ ನಕ್ಕುಂದಿ, ಚಂದ್ರಶೇಖರ ಪಾಟೀಲ್ ಗೂಗೆಬಾಳ, ವರಪ್ರಸಾದ ಗೌಡ, ಟಿ. ಶ್ರೀನಿವಾಸರೆಡ್ಡಿ, ಬಿ. ಗೋವಿಂದ, ಮಲ್ಲಿಕಾರ್ಜುನ ಜಕ್ಕಲದಿನ್ನಿ ಹಾಗೂ ಲಿಂಗರಾಜ ಹೂಗಾರ ಅವರನ್ನು ನೇಮಕ ಮಾಡಲಾಗಿದೆ.

ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ರವೀಂದ್ರ ಜಲ್ದಾರ್, ಸಂತೋಷ ರಾಜಗುರು ಹಾಗೂ ಜಂಬಣ್ಣ ನಿಲೋಗಲ್ ಅವರನ್ನು ನೇಮಕಗೊಳಿಸಲಾಗಿದೆ.

ಜಿಲ್ಲಾ ಕಾರ್ಯದರ್ಶಿಗಳಾಗಿ ಬಸ್ಸಮ್ಮ ಯಾದವ, ಶಾರದಾ ರಾಥೋಡ, ಶಿವರಾಜ ಪತ್ತೇಪುರ, ಕೆ. ನಾಗಲಿಂಗಸ್ವಾಮಿ, ಚಂದಪ್ಪ ಬುದ್ದಿನ್ನಿ, ವಾಣಿಶ್ರೀ, ಶೈಲಜಾ ಷಡಾಕ್ಷರಪ್ಪ ಹಾಗೂ ಟಿ. ಸುಬ್ಬಾರಾವ್ ಅವರನ್ನು ನೇಮಕ ಮಾಡಲಾಗಿದೆ.

ಇದೇ ವೇಳೆ ಕೋಶಾಧ್ಯಕ್ಷರಾಗಿ ಅಯ್ಯಪ್ಪ ಮಾಳೂರು, ವಕ್ತಾರರಾಗಿ ಸಿದ್ದನಗೌಡ ನೆಲಹಾಳ ಹಾಗೂ ಕಾರ್ಯಾಲಯದ ಕಾರ್ಯದರ್ಶಿಯಾಗಿ ಮಂಜುನಾಥ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News