ಸಿಂಧನೂರು: ಮರಕ್ಕೆ ಬೈಕ್ ಢಿಕ್ಕಿ; ಇಬ್ಬರು ಮೃತ್ಯು
Update: 2025-12-28 09:57 IST
ಸಾಂದರ್ಭಿಕ ಚಿತ್ರ PC: freepik
ರಾಯಚೂರು: ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರಿಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸಿಂಧನೂರು ತಾಲೂಕಿನ ಮೂಡಲಗಿರಿಕ್ಯಾಂಪ್ ಬಳಿ ರವಿವಾರ ಮಧ್ಯರಾತ್ರಿ ನಡೆದಿದೆ.
ಮೃತಪಟ್ಟವರು ಗಾಂಧಿನಗರದ ಸಂತೋಷ (22), ಹನುಮಂತರಾಯ (22) ಎನ್ನಲಾಗಿದೆ.
ಇವರಿಬ್ಬರು ಬೈಕ್ ನಲ್ಲಿ ಗಾಂಧಿನಗರದಿಂದ ಸಿಂಧನೂರಿಗೆ ತೆರಳುವಾಗ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಸಿಂಧನೂರು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಯಿತು. ಆಸ್ಪತ್ರೆಯ ಬಳಿ ಮೃತ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
ಸಿಂಧನೂರು ಸಂಚಾರಿ ಪೊಲೀಸ್ ಠಾಣಾ ವ್ಯಕ್ತಿಯಲ್ಲಿ ಜರುಗಿದೆ.