×
Ad

ರಾಯಚೂರು | ಕೆಡಿಪಿ ಸಭೆಯಲ್ಲಿ ರಮ್ಮಿ ಆಡಿದ ಅರಣ್ಯ ಅಧಿಕಾರಿ!

Update: 2025-07-18 20:40 IST

ರಾಯಚೂರು: ಇಲ್ಲಿನ‌ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್ ಅಧ್ಯಕ್ಷತೆಯಲ್ಲಿ ಗಂಭೀರ ವಿಷಯದ ಕುರಿತು ಚರ್ಚೆ ನಡೆಯುತ್ತಿರುವ ವೇಳೆ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಪ್ರವೀಣ ಅವರು ತಮ್ಮ ಮೊಬೈಲ್ ನಲ್ಲಿ ಆನ್‌ಲೈನ್‌ ರಮ್ಮಿ ಆಡುತ್ತಿರುವ ವೀಡಿಯೋ ವೈರಲ್ ಆಗಿದ್ದು, ಸಚಿವರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಶಾಸಕರು, ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಅಭಿವೃದ್ಧಿಯ ಕುರಿತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಗಂಭೀರ ಚರ್ಚೆ ಮಾಡುವಾಗ, ಗಾಂಭೀರ್ಯತೆ ತೋರದೆ ಮೊಬೈಲ್ ನಲ್ಲಿ ರಮ್ಮಿ ಆಡುತ್ತಾ ಕಾಲಾಹರಣ ಮಾಡಿ ಅಶಿಸ್ತು ತೋರಿದ್ದಾರೆ ಎಂದು ಕೆಲ ಖಾಸಗಿ ಮಾಧ್ಯಮದಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ಸಭೆಯಲ್ಲಿಯೆ ಸಚಿವರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು ಸಭಾಂಗಣದಿಂದ‌ ಹೊರಗೆ ಕಳುಹಿಸಿದರು.

ಬಳಿಕ‌ ಅಧಿಕಾರಿ ವಿರುದ್ದ ನೋಟೀಸ್ ನೀಡಿ ಶಿಸ್ತು ಕ್ರಮ ಜರುಗಿಸಿ, ಸರಕಾರಕ್ಕೆ ವರದಿ ಸಲ್ಲಿಸಲು ಜಿಲ್ಲಾಧಿಕಾರಿ ನೀತಿಶ್ ಕೆ. ಅವರಿಗೆ ಆದೇಶಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News