ರಾಯಚೂರು | ಬೈಕ್‌ಗೆ ಲಾರಿ ಢಿಕ್ಕಿ: ಸವಾರ ಸ್ಥಳದಲ್ಲೇ ಮೃತ್ಯು
Update: 2025-06-17 21:49 IST
ಸಾಂದರ್ಭಿಕ ಚಿತ್ರ
ರಾಯಚೂರು: ಮಾನ್ವಿ ತಾಲೂಕಿನ ಕವಿತಾಳ ಬಳಿಯ ವಟಗಲ್ ಗ್ರಾಮದಲ್ಲಿ ಲಾರಿ ಮತ್ತು ಬೈಕ್ ಮಧ್ಯ ಢಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಇಂದು ನಡೆದಿದೆ.
ಮಾನ್ವಿ ತಾಲ್ಲೂಕಿನ ಯರಮಲದೊಡ್ಡಿ ಗ್ರಾಮದ ನಿವಾಸಿ ಬೀರಪ್ಪ(42) ಮೃತಪಟ್ಟಿದ್ದು, ಬಾಲಕಿ ಅಶ್ವಿನಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಬೀರಪ್ಪ ಬೈಕ್ ನಲ್ಲಿ ತನ್ನ ಮಗಳ ಜೊತೆ ಶಾಲಾ ವರ್ಗಾವಣೆ ಪತ್ರ (ಟಿ.ಸಿ) ತರಲು ಪಾಮನಕಲ್ಲೂರಿನ ಸರಕಾರಿ ಪ್ರೌಢ ಶಾಲೆಗೆ ಹೊರಟಿದ್ದರು. ಮಾರ್ಗಮಧ್ಯೆ ವಟಗಲ್ ಸಮೀಪ ಲಾರಿ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಗಾಯಗೊಂಡ ಬಾಲಕಿ ಅಶ್ವಿನಿಯನ್ನು ಚಿಕಿತ್ಸೆಗಾಗಿ ಕವಿತಾಳ ಗ್ರಾಮ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಕವಿತಾಳ ಪಿ.ಎಸ್.ಐ ವೆಂಕಟೇಶ ಭೇಟಿ ನೀಡಿ ಪರಿಶೀಲಿಸಿದ್ದಾರೆ.