×
Ad

ರಾಯಚೂರು| ರಿಮ್ಸ್ ಆಸ್ಪತ್ರೆಯಲ್ಲಿ ಅಸ್ಪೃಶ್ಯತೆ ಆಚರಣೆ ಆರೋಪ; ಪ್ರಕರಣ ದಾಖಲು: ಸಾಕ್ಷಿ ನೀಡಲು ಮನವಿ

Update: 2025-02-19 20:17 IST

ರಾಯಚೂರು: ಇಲ್ಲಿನ ರಿಮ್ಸ್ ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಮೇಲೆ ಅಸ್ಪೃಶ್ಯತೆ ಆಚರಣೆಯ ನಡೆದ ಬಗ್ಗೆ ಸ್ಥಳೀಯ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಧಿತರು ಅಥವಾ ಇತರರು ಸಾಕ್ಷಿದಾರರು ಹೇಳಿಕೆ ನೀಡಬಹುದು ಎಂದು ಜಿಲ್ಲಾ ಪೊಲೀಸ್ ಉಪಾ ಅಧೀಕ್ಷಕರು ತಿಳಿಸಿದ್ದಾರೆ.

ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯ ಗುನ್ನೆ ನಂ:39/2023ರ ಪ್ರಕರಣದಲ್ಲಿ ರಾಯಚೂರಿನ ರಿಮ್ಸ್ ಹಾಗೂ ಇನ್ನಿತರೆ ಸಂಸ್ಥೆಗಳಲ್ಲಿ ಅಸ್ಪೃಶ್ಯತೆ ಆಚರಣೆ ನಡೆದಿರುವುದರಿಂದ ಕಲಂ 7(1)ಎ ಪಿ.ಸಿ.ಆರ್ ಕಾಯ್ದೆ ಪ್ರಕಾರ ರಾಯಚೂರಿನ ಪೊಲೀಸ್ ಉಪಾಧೀಕ್ಷಕರು ಜನವರಿ 02ರಿಂದ ತನಿಖೆ ಪ್ರಾರಂಭಿಸಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಧಿತರ ಪರವಾಗಿ ಸಾರ್ವಜನಿಕರು ಪ್ರತ್ಯಕ್ಷ ಅಥವಾ ಪರೋಕ್ಷ ಸಾಕ್ಷಿಯಾಗಿರುವವರು ಅಸ್ಪೃಶ್ಯತೆ ಆಚರಣೆ ಆಗಿರುವ ಬಗ್ಗೆ ತಮ್ಮಲ್ಲಿರುವ ಸಾಕ್ಷಿಯನ್ನು ತನಿಖಾಧಿಕಾರಿಗಳಾದ ಪೊಲೀಸ್ ಉಪಾಧೀಕ್ಷಕರಿಗೆ ನೀಡುವಂತೆ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News