×
Ad

ರಾಯಚೂರು | ಜನಾಂದೋಲನಾ ಕೇಂದ್ರದಿಂದ ಎರಡು ದಿನ ಚಿಂತನ- ಮಂಥನ ಕಾರ್ಯಕ್ರಮ; ಬಿ.ಬಸವರಾಜ್

Update: 2025-05-22 21:00 IST

ರಾಯಚೂರು: ಹೈದರಾಬಾದ್- ಕರ್ನಾಟಕ ಜನಾಂದೋಲನ ಕೇಂದ್ರ ಜಿಲ್ಲಾ ಸಮಿತಿಯಿಂದ ಮೇ 24, 25 ರಂದು ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕೆವಿಕೆ ಸಭಾಂಗಣದಲ್ಲಿ 'ವರ್ತಮಾನ ಸಂದರ್ಭದ ರಾಜಕಾರಣ ತತ್ವ ಸಿದ್ಧಾಂತಗಳ ಮನನ' ಧ್ಯೆಯವಾಕ್ಯದಡಿ ಚಿಂತನ-ಮಂಥನ ಕಾರ್ಯಕ್ರಮ ನಡೆಯಲಿದೆ ಎಂದು ಹೈದರಾಬಾದ್- ಕರ್ನಾಟಕ ಜನಾಂದೋಲನ ಕೇಂದ್ರದ ಜಿಲ್ಲಾ ಘಟಕದ ಅಧ್ಯಕ್ಷ ಬಿ.‌ ಬಸವರಾಜ ತಿಳಿಸಿದರು.

ಮೇ 24ರಂದು ಬೆಳಿಗ್ಗೆ 9.30ರಿಂದ 12ರವರೆಗೆ ಗೋಷ್ಠಿ-1 ನಡೆಯಲಿದೆ. ಸಾಹಿತಿ ಶಿವಸುಂದರ ಅವರು ಡಾ.'ಅಂಬೇಡ್ಕರ್ ಬರೆದ ಸಂವಿಧಾನ ಮತ್ತು ಬಯಸಿದ್ದ ಸಂವಿಧಾನ ಕುರಿತು ವಿಷಯ ಮಂಡಿಸಲಿದ್ದಾರೆ. ಈ ವೇಳೆ ವಿದ್ಯಾನಿಧಿ ಕಾಲೇಜಿನ ಪ್ರಾಂಶುಪಾಲ ಚಂದ್ರಗಿರೀಶ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಬಿ.‌ಬಸವರಾಜ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.  


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News