×
Ad

ತೀರ್ಥಹಳ್ಳಿ: ಡಿಜೆ ಸದ್ದಿಗೆ ಹೆಜ್ಜೆ ಹಾಕುತ್ತಿದ್ದ ವ್ಯಕ್ತಿ ಕುಸಿದು ಬಿದ್ದು ಸಾವು

Update: 2024-09-16 22:07 IST

ಇ.ಎಸ್. ಶ್ಯಾಮಣ್ಣ

ತೀರ್ಥಹಳ್ಳಿ: ತಾಲೂಕಿನ ಬೇಗುವಳ್ಳಿಯಲ್ಲಿ ನಡೆದ ಗಣೇಶೋತ್ಸವ ಮೆರವಣಿಗೆಯಲ್ಲಿ ಡಿಜೆ ಸದ್ದಿಗೆ ಹೆಜ್ಜೆ ಹಾಕುತ್ತಿದ್ದ ಬಿದರಹಳ್ಳಿ ಗ್ರಾಮದ ಇ.ಎಸ್. ಶ್ಯಾಮಣ್ಣ (66) ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟ ಘಟನೆ ರವಿವಾರ ವರದಿಯಾಗಿದೆ.

ಡಿ.ಜೆ.ಅಬ್ಬರಕ್ಕೆ ಗುಬ್ಬಚ್ಚಿಗಳ ಸಾವು:

ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆಯಲ್ಲಿ ವಿಪರೀತ ಪ್ರಮಾಣದ ಡಿಜೆ ಸೌಂಡ್ ಗೆ ತೀರ್ಥಹಳ್ಳಿ ಪಟ್ಟಣದ ಆಜಾದ್‌ ರಸ್ತೆಯ ಡಿವೈಡ‌ರ್ ಮೇಲಿನ ಮರದಲ್ಲಿ ವಾಸವಾಗಿದ್ದ ಗುಬ್ಬಚ್ಚಿ, ಸಣ್ಣ ಪಕ್ಷಿಗಳು ಮೃತಪಟ್ಟಿವೆ. ಕೆಲವು ಪಕ್ಷಿಗಳು ಹಾರಿ ಹೋಗಿವೆ.

ಅಲ್ಲದೇ ಡಿಜೆ ಹೈಪವರ್ ಲೈಟ್ ಗೆ ಹಲವಾರು ಮೊಬೈಲ್ ಗಳು ಹಾನಿಯಾಗಿವೆ. ಲೇಸರ್ ಕಿರಣಗಳಿಂದ ಹಲವಾರು ಮೊಬೈಲ್ ಕ್ಯಾಮೆರಾ ಲೆನ್ಸ್ ಗಳನ್ನು ಹಾನಿಗೊಳಿಸಿದೆ. ಕೆಲವರಿಗೆ ಇದು ತಕ್ಷಣ ಗಮನಕ್ಕೆ ಬರದೇ ತುಂಬಾ ಹೊತ್ತು ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿದ್ದರಿಂದ ಹಲವಾರು ಜನರ ಮೊಬೈಲ್ ಡಿಸ್ಪ್ಲೇ ಕೂಡಾ ಹಾನಿಯಾಗಿದೆ ಎನ್ನಲಾಗಿದೆ.

ಕೆಲವು ಅಂಗಡಿ ಮಳಿಗೆಗಳ ವಸ್ತುಗಳು ಅಲ್ಲಾಡಿವೆ. ಔಷಧಿ ಮಳಿಗೆಗಳಲ್ಲಿ ಕೂಡಿದ್ದ ಗಾಜಿನ ಬಾಟಿಲಿ, ಅಂಗಡಿಗಳಲ್ಲಿ ಸಂಗ್ರಹಿಸಿದ್ದ ವಿವಿಧ ರೀತಿಯ ವಸ್ತುಗಳು ಕೆಳಗೆ ಬಿದ್ದು ಹಾಳಾಗಿರುವ ಕುರಿತು ವರದಿಯಾಗಿದೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News