×
Ad

ಶಿವಮೊಗ್ಗ | ಡಕಾಯಿತಿಗೆ ಸಂಚು ರೂಪಿಸಿದ್ದ ಆರೋಪ : ಇಬ್ಬರ ಸರೆ

Update: 2024-02-26 22:58 IST

ಶಿವಮೊಗ್ಗ: ರಾತ್ರಿ ವೇಳೆ ಮಚ್ಚು, ಚಾಕು, ಖಾರದ ಪುಡಿ ಹಿಡಿದುಕೊಂಡು ಡಕಾಯಿತಿಗೆ ಸಂಚು ರೂಪಿಸಿದ್ದ ಗ್ಯಾಂಗ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಇಬ್ಬರು ಆರೋಪಿಗಳು ಸಿಕ್ಕಿಬಿದ್ದಿದ್ದು ಮೂವರು ಪರಾರಿಯಾಗಿದ್ದಾರೆ.

ಶಿವಮೊಗ್ಗದ ಸಾಗರ ರಸ್ತೆಯಲ್ಲಿರುವ ಪುರದಾಳು ರಸ್ತೆಯಲ್ಲಿ ಐವರು ಯುವಕರು ದಾರಿಯಲ್ಲಿ ಹೋಗುವವರನ್ನು ತಡೆದು, ಡಕಾಯಿತಿಗೆ ಹೊಂಚು ಹಾಕುತ್ತಿದ್ದಾರೆ ಎಂದು ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆ ರಾತ್ರಿ 11.30ರ ಹೊತ್ತಿಗೆ ಪುರದಾಳು ರಸ್ತೆಯಲ್ಲಿ ಗ್ಯಾಂಗ್ ಇದ್ದ ಸ್ಥಳದ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಶಿಕಾರಿಪುರದ ಮುಹಮ್ಮದ್ ಮುಸೇಬ್ (22) ಮತ್ತು ಶಿವಮೊಗ್ಗದ ತೌಸಿಫ್ (22) ಎಂಬುವವರು ಸಿಕ್ಕಿಬಿದ್ದಿದ್ದಾರೆ. ಇವರಿಂದ ಮಚ್ಚು, ಚಾಕು ಮತ್ತು 100 ಗ್ರಾಂ ಖಾರದ ಪುಡಿ ವಶಕ್ಕೆ ಪಡೆಯಲಾಗಿದೆ. ಇವರ ಗ್ಯಾಂಗ್‌ನಲ್ಲಿದ್ದ ಇನ್ನೂ ಮೂವರು ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.

ಕಾರ್ಯಾಚರಣೆಯಲ್ಲಿ ಪಿಎಸ್‌ಐ ನಾಗರಾಜ್, ಸಿಬ್ಬಂದಿ ನಾಗಪ್ಪ ಅಡಿವೆಪ್ಪನವರ್, ಹರೀಶ್‌ನಾಯ್ಕ, ಹರೀಶ್ ದಾಳಿಯಲ್ಲಿ ಭಾಗವಹಿಸಿದ್ದರು. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News