×
Ad

ಶಿವಮೊಗ್ಗ : ವಿದ್ಯುತ್ ತಂತಿ ತಗುಲಿ ಯುವಕ ಮೃತ್ಯು

Update: 2024-10-02 21:36 IST

ರಕ್ಷಿತ್ (22) 

ಶಿವಮೊಗ್ಗ: ತಗಡಿನ ಶೆಡ್ ನಿಮಾರ್ಣದ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ಹೊಳೆಹೊನ್ನೂರು ಸಮೀಪದ ಆನವೇರಿಯಲ್ಲಿ ನಡೆದಿದೆ.

ಮೃತ ಯುವಕನ್ನು ಹನುಮಂತಾಪುರದ ನಿವಾಸಿ ರಕ್ಷಿತ್ (22) ಎಂದು ಗುರುತಿಸಲಾಗಿದೆ. ರಕ್ಷಿತ್ ಆನವೇರಿಯ ಕೆ.ಕೆ ರಸ್ತೆಯಲ್ಲಿ ಖಾಲಿ ಜಾಗವೊಂದನ್ನು ಗುತ್ತಿಗೆ ಪಡೆದು ತನ್ನ ಚಿಕ್ಕಪ್ಪನ ಮಗನೊಂದಿಗೆ ಸೇರಿ ಹೊಸದಾಗಿ ಹೋಟೆಲ್ ಶೆಡ್ ನಿರ್ಮಿಸಿದ್ದಾನೆ. ಬುಧವಾರ ಶೆಡ್‌ಗೆ ವಿದ್ಯುತ್ ಸಂಪರ್ಕ ಕಲ್ಪಿಸುವಾಗ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಅಸ್ವಸ್ಥನಾಗಿದ್ದಾನೆ. ಕೂಡಲೇ ಯುವಕನನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಯುವಕ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News