×
Ad

ಎಸೆಸೆಲ್ಸಿ ಫಲಿತಾಂಶ | ಶಿವಮೊಗ್ಗದ ಮೂವರು ವಿದ್ಯಾರ್ಥಿಗಳಿಗೆ 625 ಅಂಕ

Update: 2025-05-02 17:30 IST

ಸಹಿಷ್ಣು ಎನ್/ ನಿತ್ಯಾ ಎಂ ಕುಲಕರ್ಣಿ/ನಮನ

ಶಿವಮೊಗ್ಗ: ಪ್ರಸಕ್ತ ಶೈಕ್ಷಣಿಕ ವರ್ಷದ ಎಸೆಸೆಲ್ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಗೊಂಡಿದ್ದು, ಶಿವಮೊಗ್ಗ ಜಿಲ್ಲೆ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಕಳೆದ ಬಾರಿ ಮೂರನೇ ಸ್ಥಾನದಲ್ಲಿದ್ದ ಶಿವಮೊಗ್ಗ ಜಿಲ್ಲೆ ಈ ಬಾರಿ ಒಂದು ಸ್ಥಾನ ಕುಸಿತಗೊಂಡಿದೆ.

ಶಿವಮೊಗ್ಗ ಜಿಲ್ಲೆ ಈ ಬಾರಿ 82.29 ಫಲಿತಾಂಶ ಪಡೆದುಕೊಂಡಿದೆ. ರಾಜ್ಯದ 22 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆದು ಪ್ರಥಮ ರ್‍ಯಾಂಕ್ ಪಡೆದಿದ್ದಾರೆ. ಇದರಲ್ಲಿ ಶಿವಮೊಗ್ಗ ಜಿಲ್ಲೆಯ ಮೂವರು ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ ರ್‍ಯಾಂಕ್ ಪಡೆದುಕೊಂಡಿದ್ದಾರೆ.

ಇದರಲ್ಲಿ ಶಿವಮೊಗ್ಗ ನಗರದ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ನಮನ, ರಾಮಕೃಷ್ಣ ಶಾಲೆಯ ನಿತ್ಯಾ ಎಂ. ಕುಲಕರ್ಣಿ ಹಾಗೂ ಆದಿಚುಂಚನಗಿರಿ ಸಂಯುಕ್ತ ಆಂಗ್ಲಮಾಧ್ಯಮ ಪ್ರೌಢಶಾಲೆಯ ಸಹಿಷ್ಣು ಎನ್. ಅವರು ಪ್ರಥಮ ರ್‍ಯಾಂಕ್ ಪಡೆದಿದ್ದಾರೆ.

ಆದಿಚುಂಚನಗಿರಿ ಶಾಲೆಯ ಸಂಜನಾ ಎಸ್. 625ಕ್ಕೆ 624 ಅಂಕ, ಶಿವಮೊಗ್ಗದ ಆಚಾರ್ಯ ಪ್ರೌಢಶಾಲೆಯ ಶಶಾಂಕ್ 624 ಅಂಕ, ಸಾಂದೀಪಿನಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಹಿತಾ ಎಂ 624 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ದ್ವೀತಿಯ ರ್‍ಯಾಂಕ್ ಪಡೆದುಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News