×
Ad

ತೀರ್ಥಹಳ್ಳಿ|‌ ರಭಸವಾಗಿ ಹರಿಯುತ್ತಿದ್ದ ಹಳ್ಳದಲ್ಲಿ ಈಜಿ ವಿದ್ಯುತ್ ಸಂಪರ್ಕ ಸರಿಪಡಿಸಿದ ಸಿಬ್ಬಂದಿ

Update: 2024-07-21 22:05 IST

ಶಿವಮೊಗ್ಗ: ಮಲೆನಾಡಿನಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಅಲ್ಲಲ್ಲಿ ಪ್ರವಾಹ ಪರಿಸ್ಥಿತಿ ಇದೆ. ಲೈನ್ ಮ್ಯಾನ್ ಒಬ್ಬರು ರಭಸವಾಗಿ ಹರಿಯುತ್ತಿದ್ದ ಹಳ್ಳದಲ್ಲಿ ಈಜಿ ವಿದ್ಯುತ್ ಸಂಪರ್ಕ ಸರಿಪಡಿಸಿದ ಘಟನೆ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸಮೀಪ ನಡೆದಿದ್ದು, ಘಟನೆಯ ವಿಡಿಯೋ ವೈರಲ್‌ ಆಗಿದೆ.

ಆಗುಂಬೆ ಸಮೀಪದ ಅರೇಹಳ್ಳಿ ಗ್ರಾ. ಪಂ ವ್ಯಾಪ್ತಿಯಲ್ಲಿ ನೀರಿನ ಮಧ್ಯೆ ಇದ್ದ ವಿದ್ಯುತ್ ತಂತಿಯೊಂದು ತುಂಡಾಗಿ ಬಿದ್ದ ಹಿನ್ನೆಲೆ ಸಿಬ್ಬಂದಿಯೊಬ್ಬರು ನೀರಿಗೆ ಜಿಗಿದು ಸಂಪರ್ಕ ಸರಿಪಡಿಸಿದ್ದಾರೆ. ಕಲಬುರ್ಗಿ ಮೂಲದ ಸಂತೋಷ್ ಎಂಬವರು ತನ್ನ ಜೀವವನ್ನು ಲೆಕ್ಕಿಸದೆ‌ ನೀರಿಗೆ ಇಳಿದು ವಿದ್ಯುತ್ ಸಂಪರ್ಕ ಸರಿಪಡಿಸಿದ್ದಾರೆ.

ಆಗುಂಬೆ ಭಾಗಕ್ಕೆ ಕಮ್ಮರಡಿಯ ಸಬ್ ಡಿವಿಜನ್ ನಿಂದ ಈ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಈ ಸಂಪರ್ಕವು ಸರಿ ಮಾಡದೆ ಇದ್ದರೆ ಮೂರು ಪಂಚಾಯಿತಿ ವಿದ್ಯುತ್ ಸಂಪರ್ಕ ಇಲ್ಲದಂತಾಗುತ್ತಿತ್ತು. ಇದನ್ನು ಮನಗಂಡು ನೀರಿಗೆ ಧುಮುಕಿ ಸಂತೋಷ್ ವಿದ್ಯುತ್ ಸಂಪರ್ಕ ಸರಿಪಡಿಸಿದ್ದಾರೆ. ಇವರ ಈ ಸಾಹಸಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News