×
Ad

ಮುಖ್ಯಮಂತ್ರಿಯ WhatsApp Channelಗೆ ಒಂದೇ ವಾರದಲ್ಲಿ 60 ಸಾವಿರಕ್ಕೂ ಅಧಿಕ ಫಾಲೋವರ್ಸ್!

Update: 2023-09-20 11:12 IST

ಬೆಂಗಳೂರು, ಸೆ,20: ರಾಜ್ಯ ಸರಕಾರ ಅಧಿಕೃತ ವಾಟ್ಸ್ ಆ್ಯಪ್ ಚಾನೆಲ್ ಆರಂಭಿಸಿದ್ದು, ಒಂದೇ ವಾರದಲ್ಲಿ 60 ಸಾವಿರಕ್ಕೂ ಅಧಿಕ ಮಂದಿ ಚಂದಾದಾರರಾಗುವ ಮೂಲಕ ಭಾರೀ ಸ್ಪಂದನ ವ್ಯಕ್ತವಾಗಿದೆ.

ಮುಖ್ಯಮಂತ್ರಿಯ ದೈನಂದಿನ ಕಾರ್ಯ ಚಟುವಟಿಕೆಗಳು, ಸರಕಾರದ ಸಾಧನೆಗಳು ಹಾಗೂ ನೂತನ ಕಾರ್ಯಕ್ರಮಗಳ ಬಗ್ಗೆ ನಿರಂತರವಾಗಿ ಮಾಹಿತಿ ನೀಡುವ ಉದ್ದೇಶದಿಂದ Chief Minister of Karnataka ಎಂಬ ಹೆಸರಿನ ಚಾನೆಲ್ ಆರಂಭಿಸಲಾಗಿದೆ ಎಂದು ಮುಖ್ಯಮಂತ್ರಿ ತನ್ನ ಮೊದಲ ಮೆಸೇಜ್ ನಲ್ಲಿ ತಿಳಿಸಿದ್ದಾರೆ.

ಸೆ.12ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಚಾನೆಲ್ ಗೆ ಚಾಲನೆ ನೀಡಿದ್ದಾರೆ. ಸದ್ಯ 60,500ಕ್ಕೂ ಅಧಿಕ ಮಂದಿ ಈ ಚಾನೆಲ್ ಗೆ ಚಂದಾದಾರ (Subscribers) ಆಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News