×
Ad

ಬಿಜೆಪಿಯ ಕೈಗೆ ಚೊಂಬು ಕೊಟ್ಟು ಕಾಂಗ್ರೆಸ್ ಕೈಗೆ ಬಲತುಂಬಿ, ಪ್ರತಿ ಮತಕ್ಕೂ ನ್ಯಾಯ ಒದಗಿಸುತ್ತೇವೆ: ಸಿದ್ದರಾಮಯ್ಯ

Update: 2024-04-21 13:35 IST

ಬೆಂಗಳೂರು, ಎ.21: ಕೇಂದ್ರ ಬಿಜೆಪಿ ಸರ್ಕಾರಕ್ಕೆ ಕರ್ನಾಟಕ 100 ರೂಪಾಯಿ ತೆರಿಗೆ ಕಟ್ಟಿದರೆ ಮರಳಿ ನಮಗೆ ಸಿಗುವುದು 13 ರೂಪಾಯಿ ಮಾತ್ರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ 'ಬಿಜೆಪಿ ಚೊಂಬು ಸರ್ಕಾರ' ಹ್ಯಾಶ್ ಟ್ಯಾಗ್ ಅಡಿಯಲ್ಲಿ ಪೋಸ್ಟ್ ಹಾಕಿರುವ ಸಿಎಂ ಮತ್ತು ಡಿಸಿಎಂ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.


ಕನ್ನಡಿಗರು ಬೆವರು ಸುರಿಸು ದುಡಿದು ಕೇಂದ್ರ ಬಿಜೆಪಿ ಸರ್ಕಾರಕ್ಕೆ 100 ರೂಪಾಯಿ ತೆರಿಗೆ ಕಟ್ಟಿದರೆ ಮರಳಿ ನಮಗೆ ಸಿಗುವುದು 13 ರೂಪಾಯಿ. ರಾಜ್ಯಕ್ಕೆ ಬರಬೇಕಿದ್ದ ಬರಪರಿಹಾರ, ವಿಶೇಷ ಅನುದಾನ, ನೀರಾವರಿ ಯೋಜನೆಗಳಿಗೆ ಆರ್ಥಿಕ ನೆರವಿನ ಬದಲಿಗೆ ಸಿಕ್ಕಿದ್ದು ಚೊಂಬು. ಈ ಚುನಾವಣೆಯಲ್ಲಿ ಬಿಜೆಪಿಯ ಕೈಗಳಿಗೆ ಚೊಂಬು ಕೊಟ್ಟು ಕಾಂಗ್ರೆಸ್ ಕೈಗಳಿಗೆ ಬಲತುಂಬಿ. ನಾವು ನಿಮ್ಮ ಪ್ರತಿ ಮತಕ್ಕೂ ನ್ಯಾಯ ಒದಗಿಸುತ್ತೇವೆ' ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

'ನ್ಯಾಯಯುತವಾಗಿ ಹಂಚಿಕೆಯಾಗದ ತೆರಿಗೆಯು ದರೋಡೆಗೆ ಸಮಾನ. ಕನ್ನಡಿಗರ ಬೆವರಿಗೆ ತಕ್ಕ ಫಲ ಸಿಗುತ್ತಿಲ್ಲ. ನಾವು ಕಟ್ಟುವ 100 ರೂಪಾಯಿಗೆ ಕೇಂದ್ರದಿಂದ ಬರುತ್ತಿರುವುದು ಕೇವಲ 13 ರೂಪಾಯಿ. ಇದು ಪಾರದರ್ಶಕತೆ ಹಾಗೂ ಸಮಾನ ಹಂಚಿಕೆಯ ಸಮಯ' ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News