×
Ad

ಸುಳ್ಳನೆಂದು ತನ್ನನ್ನು ತಾನು ರುಜುವಾತು ಮಾಡಿಕೊಂಡ ಪ್ರಧಾನಿ ಮೋದಿ : ನಟ ಕಿಶೋರ್

Update: 2024-07-05 21:52 IST

ಬೆಂಗಳೂರು : ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ‘ತಮ್ಮನ್ನು ಹಿಂದೂ ಎಂದು ಕರೆದುಕೊಳ್ಳುವವರು ದಿನದ 24 ಗಂಟೆ ಹಿಂಸೆ ಮತ್ತು ದ್ವೇಷದಲ್ಲಿ ತೊಡಗುತ್ತಾರೆ. ಅವರು ಹಿಂದೂಗಳೇ ಅಲ್ಲ’ ಎಂದು ಹೇಳಿದ್ದ ಮಾತನ್ನು ಪ್ರಧಾನಿ ಮೋದಿ ಕ್ಷಣಾರ್ಧದಲ್ಲಿ ತಿರುಚಿ ‘ತನ್ನನ್ನು ತಾನು ಸುಳ್ಳನೆಂದು ಮತ್ತೆ ರುಜುವಾತು ಮಾಡಿಕೊಂಡಿದ್ದಾರೆ’ ಎಂದು ಚಿತ್ರನಟ ಕಿಶೋರ್ ಕಿಡಿಕಾರಿದ್ದಾರೆ.

ಈ ಸಂಬಂಧ ಸಾಮಾಜಿಕ ಮಾಧ್ಯಮದಲ್ಲಿ ವಿಡೀಯೊ ತುಣುಕನ್ನು ಹಂಚಿಕೊಂಡಿರುವ ಅವರು, ‘ತನ್ನ ಅಯೋಗ್ಯತೆಯನ್ನು ಮುಚ್ಚಲು, ಇನ್ನೊಬ್ಬರನ್ನು ಕೀಳೆಂದು ತೋರಿಸಲು, ರಾಜಾರೋಷವಾಗಿ ಮಾತು ತಿರುಚುವ ಹಸಿ ಸುಳ್ಳು ಹೇಳುವ, ಅತ್ಯಂತ ಕೀಳುಮಟ್ಟಕ್ಕೂ ಇಳಿಯಬಲ್ಲ, ಘನತೆ ಹೀನ ನಾಚಿಕೆಗೇಡು ಸುಳ್ಳನೆಂದು ತನ್ನನ್ನು ತಾನು ತುಂಬಿದ ಸಭೆಯಲ್ಲಿ ಮತ್ತೆ ರುಜುವಾತು ಮಾಡಿಕೊಂಡ ಮೋದಿ.. ಇದೆಂತಹ ವಿಕೃತ ಮನಸ್ಥಿತಿ. ಸತ್ಯಕ್ಕೆ ಶಾಂತಿಗೆ ಹೆಸರಾದ ದೇಶಕ್ಕೆ ಎಂತಹ ಪ್ರಧಾನಿ, ನಾಚಿಕೆಗೇಡು…ದೇಶಕ್ಕೆ ಅವಮಾನ’ ಎಂದು ಬರೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News