×
Ad

ಟ್ವಿಟರ್‌ನ ಹೊಸ ಲೋಗೋ ಬಿಡುಗಡೆ: ನೀಲಿ ಹಕ್ಕಿಗೆ 'ಗುಡ್‌ಬೈ'

Update: 2023-07-24 16:54 IST

ಕ್ಯಾಲಿಫೋರ್ನಿಯಾ: ಜನಪ್ರಿಯ ಸಾಮಾಜಿಕ ಜಾಲತಾಣ ಟ್ವಿಟರ್‌ ತನ್ನ ನೀಲಿ ಹಕ್ಕಿ ಲೋಗೋ ಕೈಬಿಟ್ಟಿದೆ. ಇಂದು ಟ್ವಿಟರ್‌ ತೆರೆದವರಿಗೆ ನೀಲಿ ಹಕ್ಕಿ ಜಾಗದಲ್ಲಿ X ಕಾಣಿಸುತ್ತಿದೆ. ಕಪ್ಪು ಹಿನ್ನೆಲೆಯೊಂದಿಗೆ ಬಿಳಿ ಬಣ್ನದಲ್ಲಿ X ಕಾಣಿಸಿಕೊಂಡಿದೆ. ರವಿವಾರವಷ್ಟೇ ಟ್ವಿಟರ್‌ ಮುಖ್ಯಸ್ಥ ಎಲಾನ್‌ ಮಸ್ಕ್‌ ಅವರು ಲೋಗೊ ಬದಲಾವಣೆಯ ಸುಳಿವು ನೀಡಿದ್ದರು.

ಟ್ವಿಟರ್‌ ಮುಖ್ಯಸ್ಥ ಎಲಾನ್‌ ಮಸ್ಕ್‌ ಮತ್ತು ಸಂಸ್ಥೆಯ ಸಿಇಒ ಲಿಂಡಾ ಯಕ್ಕರಿನೊ ನೂತನ ಲೋಗೋ ಅನಾವರಣಗೊಳಿಸಿದ್ದಾರೆ.

“ಇಲ್ಲಿದೆ! ನಾವಿದನ್ನು ಮಾಡೋಣ,” ಎಂದು ಟ್ವೀಟ್‌ ಮಾಡಿದ ಲಿಂಡಾ ಕಂಪೆನಿಯ ಸ್ಯಾನ್‌ ಫ್ರಾನ್ಸಿಸ್ಕೋ ಕಚೇರಿಗಳಲ್ಲಿ ಬಿಂಬಿಸಲಾದ ಹೊಸ ಲೋಗೋದ ಚಿತ್ರಗಳನ್ನು ಪೋಸ್ಟ್‌ ಮಾಡಿದ್ದಾರೆ.

ಟ್ವಿಟರ್‌ನ ಹೊಸ ಲೋಗೋ ಹಲವು ಬಳಕೆದಾರರಿಗೆ ಇಷ್ಟವಿಲ್ಲದಂತೆ ತೋರುತ್ತಿದ್ದು ಇಂದು ಗುಡ್‌ಬೈ ಟ್ವಿಟರ್‌ ಹ್ಯಾಶ್‌ ಟ್ಯಾಗ್‌ ಟ್ರೆಂಡಿಂಗ್‌ ಆಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News